ದಾವೀದನು ಗವಿಯಲ್ಲಿ ಇದ್ದ ದಿವಸಗಳೆಲ್ಲಾ ಅವರು ಆ ಅರಸನ ಬಳಿಯಲ್ಲಿ ವಾಸವಾಗಿದ್ದರು.
Cross references
ಇಗೋ, ಫಿಲಿಷ್ಟಿಯರು ಕೆಯಾಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಿದರು.
ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು.
ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ--
ಆಗ ದಾವೀದನು ಗಡಿಸ್ಥಳದಲ್ಲಿ ಇದ್ದನು; ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
ಬೆನ್ಯಾವಿಾನನ ಮತ್ತು ಯೆಹೂದನ ಮಕ್ಕಳಲ್ಲಿ ಕೆಲವರು ಬಲವಾದ ಸ್ಥಳದಲ್ಲಿದ್ದ ದಾವೀದನ ಬಳಿಗೆ ಬಂದರು.
ಆಗ ಕರ್ತನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನಂದರೆ --
ಆದರೆ ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯ ವರೆಗೆ ಅವನ ಸಮಸ್ತ ಆಳಿಕೆಯೂ ಅವನ ಪರಾಕ್ರಮವೂ ಅವನ ಮೇಲೆಯೂ ಇಸ್ರಾಯೇಲಿನ ಮೇಲೆಯೂ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಗತಿಸಿದ ಕಾಲಗಳೂಇಗೋ, ದರ್ಶಿಯಾದ ಸಮುವೇಲನ ಪುಸ್ತಕ ದಲ್ಲಿಯೂ ಪ್ರವಾದಿಯಾದ ನಾತಾನನ ಪುಸ್ತಕ ದಲ್ಲಿಯೂ ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.
ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು.
ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.
ಕರ್ತನಲ್ಲಿ ನಾನು ಭರವಸವನ್ನು ಇಟ್ಟಿದ್ದೇನೆ; ಪಕ್ಷಿಯಂತೆ ನಿಮ್ಮ ಬೆಟ್ಟಕ್ಕೆ ಓಡು ಎಂದು ನನ್ನ ಪ್ರಾಣಕ್ಕೆ ನೀವು ಹೇಳುವದು ಹೇಗೆ?
ಇವರು ಯಾವದನ್ನು ಒಪ್ಪಂದ ಎಂದು ಹೇಳುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
ಇದಲ್ಲದೆ ಈ ಪಟ್ಟಣದಲ್ಲಿ ಅವರು ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣಕ್ಕೆ ಓಡಿಹೋಗಿರಿ; ಯಾಕಂದರೆ-- ಮನುಷ್ಯ ಕುಮಾರನು ಬರುವದರೊಳಗಾಗಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕಾಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.