Home Bibles ಕೀರ್ತನೆಗಳು 11:1 · ಕನ್ನಡ ಬೈಬಲ್
ಕೀರ್ತನೆಗಳು 11:1 · ಕನ್ನಡ ಬೈಬಲ್

ಕರ್ತನಲ್ಲಿ ನಾನು ಭರವಸವನ್ನು ಇಟ್ಟಿದ್ದೇನೆ; ಪಕ್ಷಿಯಂತೆ ನಿಮ್ಮ ಬೆಟ್ಟಕ್ಕೆ ಓಡು ಎಂದು ನನ್ನ ಪ್ರಾಣಕ್ಕೆ ನೀವು ಹೇಳುವದು ಹೇಗೆ?

Cross references

1 ಸಮುವೇಲ 19:11

ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ

1 ಸಮುವೇಲ 20:38

ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು.

1 ಸಮುವೇಲ 21:10

ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್‌ ಊರಿನ ಅರಸನಾದ ಆಕೀಷನ ಬಳಿಗೆ ಓಡಿ ಬಂದನು.

1 ಸಮುವೇಲ 22:3

ದಾವೀದನು ಅಲ್ಲಿಂದ ಹೊರಟು ಮೋವಾಬ್‌ ದೇಶದ ಮಿಚ್ಪೆಗೆ ಬಂದು ಮೋವಾಬಿನ ಅರಸನಿಗೆದೇವರು ನನಗೆ ಏನು ಮಾಡುವನೋ ಎಂದು ನಾನು ತಿಳಿಯುವವರೆಗೂ ನನ್ನ ತಂದೆ ತಾಯಿಗಳು ಹೊರಟು ಬಂದು ನಿನ್ನ ಬಳಿಯಲ್ಲಿ ವಾಸಿಸಲಿ ಎಂದು ಹೇಳಿ ಅವರನ್ನು ಮೋವಾಬಿನ ಅರಸನ ಬಳಿಗೆ ಕರತಂದು ಬಿಟ್ಟನು.

1 ಸಮುವೇಲ 23:14

ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ ಜೀಫ್‌ ಎಂಬ ಅರಣ್ಯದ ಬೆಟ್ಟದ ಲ್ಲಿಯೂ ವಾಸವಾಗಿದ್ದನು. ಸೌಲನು ದಿನಾಲು ಅವ ನನ್ನು ಹುಡುಕುತ್ತಿದ್ದನು; ಆದರೆ ದೇವರು ಅವನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.

1 ಸಮುವೇಲ 27:1

ದಾವೀದನು ತನ್ನ ಹೃದಯದಲ್ಲಿ--ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಮಡಿದುಹೋಗುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿಹೋಗುವ ದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು ಅಂದು ಕೊಂಡನು.

2 ದಿನವೃತ್ತಾಂತ 14:11

ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.

2 ದಿನವೃತ್ತಾಂತ 16:8

ಕೂಷಿಯರೂ ಲೂಬ್ಯರೂ ಮಹಾಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ ರಾಹುತರೂ ಇದ್ದರಲ್ಲವೇ? ಆಗ ನೀನು ಕರ್ತನ ಮೇಲೆ ಆತುಕೊಂಡದ್ದರಿಂದ ಆತನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದನು.

ನೆಹೆಮ್ಯ 6:11

ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.

ಕೀರ್ತನೆಗಳು 7:1

ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು;

ಕೀರ್ತನೆಗಳು 7:2

ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.

ಕೀರ್ತನೆಗಳು 9:10

ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.

ಕೀರ್ತನೆಗಳು 16:1

ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.

ಕೀರ್ತನೆಗಳು 25:2

ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.

ಕೀರ್ತನೆಗಳು 31:14

ಓ ಕರ್ತನೇ, ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನನ್ನ ದೇವರು ನೀನೇ ಎಂದು ಹೇಳಿದ್ದೇನೆ.

ಕೀರ್ತನೆಗಳು 55:6

ನನಗೆ ಪಾರಿವಾಳದಂತೆ ರೆಕ್ಕೆಗಳಿರುತ್ತಿದ್ದರೆ ಹಾರಿ ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು ಎಂದು ಅಂದುಕೊಂಡೆನು.

ಕೀರ್ತನೆಗಳು 56:11

ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?

ಸಾಮೇತಿಗಳು 6:5

ಬೇಟೆ ಗಾರನ ಕೈಯಿಂದ ಜಿಂಕೆಯೂ ಪಕ್ಷಿಯೂ ತಪ್ಪಿಸಿಕೊಳ್ಳು ವಂತೆ ತಪ್ಪಿಸಿಕೋ.

ಯೆಶಾಯ 26:3

ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.

ಯೆರೆಮಿಯ 48:14

ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ.

ಲೂಕ 13:31

ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.

Interlinear

Choose Theme