Home Bibles 1 ಸಮುವೇಲ 2:36 · ಕನ್ನಡ ಬೈಬಲ್
1 ಸಮುವೇಲ 2:36 · ಕನ್ನಡ ಬೈಬಲ್

ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡ ಬಿದ್ದು ಒಂದು ಬೆಳ್ಳಿ ಹಣವನ್ನೂ ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ--ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆ ಯಲ್ಲಿ ಸೇರಿಸಿಕೋ ಎಂದು ಹೇಳುವರು ಅಂದನು.

Cross references

ನ್ಯಾಯಾಧಿಪತಿಗಳು 17:10

ವಿಾಕನು ಅವನಿಗೆ--ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ ಯಾಜಕನಾ ಗಿಯೂ ಇರು; ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ ಒಂದು ದುಸ್ತು ವಸ್ತ್ರಗಳನ್ನೂ ಆಹಾರ ವನ್ನೂ ಕೊಡುವೆನು ಅಂದನು. ಹಾಗೆಯೇ ಲೇವಿಯನು ಹೋದನು. ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವದಕ್ಕೆ ಸಮ್ಮತಿಪಟ್ಟನು.

1 ಸಮುವೇಲ 2:29

ನನ್ನ ಜನರಾದ ಇಸ್ರಾಯೇಲ್ಯರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವದಕ್ಕೆ ನನ್ನ ವಾಸಸ್ಥಳ ದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ ಅರ್ಪಣೆಯನ್ನೂ ನೀವು ಒದ್ದು ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವದೇನು?

1 ಅರಸುಗಳು 2:27

ಹೀಗೆಯೇ ಕರ್ತನು ಶೀಲೋ ವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವದಕ್ಕೆ ಸೊಲೊಮೋನನು ಎಬ್ಯಾತಾರನನ್ನು ಕರ್ತನಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.

2 ಅರಸುಗಳು 23:9

ಆದರೆ ಉನ್ನತ ಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಕರ್ತನ ಬಲಿಪೀಠದ ಬಳಿ ಯಲ್ಲಿ ಸೇರದೆ ತಮ್ಮ ಸಹೋದರರ ಮಧ್ಯದಲ್ಲಿ ಹುಳಿ ಇಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು.

ಯೆಹೆಜ್ಕೇಲ 44:10

ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.

ಮಲಾಕಿ 1:13

ಇದಲ್ಲದೆ ನೀವು--ಇಗೋ, ಎಂಥಾ ಪ್ರಯಾಸ ಎಂದು ಹೇಳಿ ಅದರ ಮೇಲೆ ಊದಿಬಿಟ್ಟಿರಿ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಹರಿಯಲ್ಪಟ್ಟದ್ದನ್ನೂ ಕುಂಟಾದದ್ದನ್ನೂ ರೋಗವುಳ್ಳದ್ದನ್ನೂ ಕಾಣಿಕೆಯಾಗಿ ತಂದಿರಿ; ಇಂಥದ್ದನ್ನು ನಾನು ನಿಮ್ಮ ಕೈಯಿಂದ ಅಂಗೀ ಕರಿಸಬಹುದೋ ಎಂದು ಕರ್ತನು ಹೇಳುತ್ತಾನೆ.ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

Interlinear

Choose Theme