Home Bibles ☰ Books 1 ಸಮುವೇಲ 2:35 · ಕನ್ನಡ ಬೈಬಲ್
1 ಸಮುವೇಲ 2:35 · ಕನ್ನಡ ಬೈಬಲ್

ಆದರೆ ನನ್ನ ಹೃದಯಕ್ಕೂ ನನ್ನ ಮನಸ್ಸಿಗೂ ಸಮ ರ್ಪಕವಾದ ಹಾಗೆ ಮಾಡುವ ನಂಬಿಕೆಯಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ ಅವನಿಗೆ ಸ್ಥಿರ ವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ನಡೆದುಕೊಳ್ಳುವನು.ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡ ಬಿದ್ದು ಒಂದು ಬೆಳ್ಳಿ ಹಣವನ್ನೂ ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ--ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆ ಯಲ್ಲಿ ಸೇರಿಸಿಕೋ ಎಂದು ಹೇಳುವರು ಅಂದನು.

Cross references

ನಿರ್ಗಮಕಾಂಡ 1:21

ಸೂಲಗಿತ್ತಿಯರು ದೇವರಿಗೆ ಭಯ ಪಟ್ಟದ್ದರಿಂದ ಆತನು ಅವರಿಗೆ ವಂಶಾಭಿವೃದ್ಧಿಯ ನ್ನುಂಟುಮಾಡಿದನು.ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.

ಅಂಕೆಗಳ ಪುಸ್ತಕ 25:13

ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.

1 ಸಮುವೇಲ 12:3

ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.

1 ಸಮುವೇಲ 16:13

ಸಮುವೇಲನು ಎಣ್ಣೆ ಇರುವ ಕೊಂಬನ್ನು ತಕ್ಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಕರ್ತನ ಆತ್ಮನು ದಾವೀದನ ಮೇಲೆ ಬಂದನು. ಸಮುವೇಲನು ಎದ್ದು ರಾಮಕ್ಕೆ ಹೋದನು.

1 ಸಮುವೇಲ 25:28

ನೀನು ದಯಮಾಡಿ ನಿನ್ನ ದಾಸಿಯದ್ರೋಹವನ್ನು ಮನ್ನಿಸಬೇಕು; ನನ್ನ ಒಡೆಯನು ಕರ್ತನ ಯುದ್ಧಗಳನ್ನು ನಡೆಸುತ್ತಾನೆ; ನಿನ್ನ ದಿನಗಳಲ್ಲಿ ನಿನ್ನ ಬಳಿಯಲ್ಲಿ ಕೆಟ್ಟತನವು ಕಂಡುಹಿಡಿ ಯಲ್ಪಟ್ಟದ್ದಿಲ್ಲ; ಆದದರಿಂದ ಕರ್ತನು ನನ್ನ ಒಡೆಯನಿಗೆ ಸ್ಥಿರವಾದ ಮನೆಯನ್ನು ಖಂಡಿತವಾಗಿ ಮಾಡುವನು.

2 ಸಮುವೇಲ 7:11

ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.

2 ಸಮುವೇಲ 7:27

ಸೈನ್ಯ ಗಳ ಓ ಕರ್ತನೇ, ಇಸ್ರಾಯೇಲಿನ ದೇವರೇ, ನಿನ್ನ ದಾಸನಿಗೆ--ನಾನು ನಿನಗೆ ಮನೆಯನ್ನು ಕಟ್ಟುವೆನೆಂದು ಪ್ರಕಟಮಾಡಿದ್ದರಿಂದ ನಿನ್ನನ್ನು ಕುರಿತು ಈ ಪ್ರಾರ್ಥನೆ ಯನ್ನು ಪ್ರಾರ್ಥಿಸುವದಕ್ಕೆ ನಿನ್ನ ದಾಸನ ಹೃದಯದಲ್ಲಿ ಉಂಟಾಯಿತು.

1 ಅರಸುಗಳು 1:8

ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.

1 ಅರಸುಗಳು 1:45

ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಏರಿಸಿ ಯಾಜಕನಾದ ಚಾದೋಕನೂ ಪ್ರವಾದಿ ಯಾದ ನಾತಾನನೂ ಅವನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ; ಅವರು ಸಂತೋಷ ಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲ ವಾಯಿತು.

1 ಅರಸುಗಳು 2:35

ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

1 ಅರಸುಗಳು 11:38

ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು.

1 ದಿನವೃತ್ತಾಂತ 6:8

ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು;

1 ದಿನವೃತ್ತಾಂತ 29:22

ಎರಡನೇ ಸಾರಿ ದಾವೀದನ ಮಗನಾದ ಸೊಲೊಮೋನನನ್ನು ಅರಸನನ್ನಾಗಿ ಮಾಡಿ ಕರ್ತನ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕ ನನ್ನು ಯಾಜಕನಾಗಿಯೂ ಅಭಿಷೇಕಿಸಿದರು.

ನೆಹೆಮ್ಯ 12:10

ಇದಲ್ಲದೆ ಯೇಷೂವನು ಯೋಯಾಕೀಮ ನನ್ನೂ ಪಡೆದನು; ಯೋಯಾಕೀಮನು ಎಲ್ಯಾಷೀಬ ನನ್ನೂ ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;

Interlinear

Choose Theme