Home Bibles 1 ಸಮುವೇಲ 2:31 · ಕನ್ನಡ ಬೈಬಲ್
1 ಸಮುವೇಲ 2:31 · ಕನ್ನಡ ಬೈಬಲ್

ಇಗೋ, ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇಲ್ಲದ ಹಾಗೆ ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿವಸಗಳು ಬರುವವು.

Cross references

1 ಸಮುವೇಲ 3:12

ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ; ನಾನು ಆರಂಭಿಸಿದ ಹಾಗೆ ಅಂತ್ಯ ವನ್ನು ಮಾಡುವೆನು.

1 ಸಮುವೇಲ 4:2

ಫಿಲಿಷ್ಟಿ ಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧ ಮಾಡಿದಾಗ ಇಸ್ರಾಯೇಲ್ಯರು ಫಿಲಿಷ್ಟಿಯರ ಮುಂದೆ ಹೊಡೆಯಲ್ಪಟ್ಟರು. ಹೇಗಂದರೆ, ಫಿಲಿಷ್ಟಿಯರು ಯುದ್ಧರಂಗದಲ್ಲಿ ಹೆಚ್ಚುಕಡಿಮೆ ನಾಲ್ಕು ಸಾವಿರ ಜನರನ್ನು ಕೊಂದುಹಾಕಿದರು.

1 ಸಮುವೇಲ 4:11

ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಕೊಲ್ಲಲ್ಪಟ್ಟರು.

1 ಸಮುವೇಲ 14:3

ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.

1 ಸಮುವೇಲ 22:17

ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.

1 ಅರಸುಗಳು 2:26

ಯಾಜಕನಾದ ಎಬ್ಯಾತಾರನಿಗೆ ಅರಸನು-- ನೀನು ಅಣತೋತಿಗೆ ನಿನ್ನ ಹೊಲಗಳಿಗೆ ಹೋಗು; ಯಾಕಂದರೆ ನೀನು ಸಾವಿಗೆ ಪಾತ್ರನಾಗಿದ್ದೀ; ಆದರೆ ನೀನು ಕರ್ತನಾದ ಯೆಹೋವನ ಮಂಜೂಷವನ್ನು ನನ್ನ ತಂದೆಯಾದ ದಾವೀದನ ಮುಂದೆ ಹೊತ್ತದ್ದ ರಿಂದಲೂ ನನ್ನ ತಂದೆಯ ಸಮಸ್ತ ಶ್ರಮೆಗಳಲ್ಲಿ ನೀನು ಶ್ರಮೆಪಟ್ಟದ್ದರಿಂದಲೂ ನಾನು ಈಗ ನಿನ್ನನ್ನು ಸಾಯಿ ಸುವದಿಲ್ಲ ಅಂದನು.

1 ಅರಸುಗಳು 2:27

ಹೀಗೆಯೇ ಕರ್ತನು ಶೀಲೋ ವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವದಕ್ಕೆ ಸೊಲೊಮೋನನು ಎಬ್ಯಾತಾರನನ್ನು ಕರ್ತನಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.

1 ಅರಸುಗಳು 2:35

ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

ಯೋಬ 22:9

ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.

ಕೀರ್ತನೆಗಳು 37:17

ದುಷ್ಟರ ತೋಳುಗಳು ಮುರಿದು ಹೋಗು ವವು; ಆದರೆ ನೀತಿವಂತರನ್ನು ಕರ್ತನು ಉದ್ಧಾರ ಮಾಡುತ್ತಾನೆ.

ಯೆಹೆಜ್ಕೇಲ 30:21

ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.

ಯೆಹೆಜ್ಕೇಲ 44:10

ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.

Interlinear

Choose Theme