Home Bibles ☰ Books 1 ಸಮುವೇಲ 2:11 · ಕನ್ನಡ ಬೈಬಲ್
1 ಸಮುವೇಲ 2:11 · ಕನ್ನಡ ಬೈಬಲ್

ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು; ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಕರ್ತನನ್ನು ಸೇವಿಸಿದನು.

Cross references

1 ಸಮುವೇಲ 1:19

ಅವರು ಉದಯದಲ್ಲಿ ಎದ್ದು ಕರ್ತನ ಮುಂದೆ ಆರಾಧಿಸಿ ಹಿಂತಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಿದನು; ಆಗ ಕರ್ತನು ಅವಳನ್ನು ಜ್ಞಾಪಕಮಾಡಿಕೊಂಡನು.

1 ಸಮುವೇಲ 1:28

ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.

1 ಸಮುವೇಲ 2:18

ಬಾಲಕನಾದ ಸಮುವೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಕರ್ತನ ಸನ್ನಿಧಿಯಲ್ಲಿ ಸೇವಿಸುತ್ತಿದ್ದನು.

1 ಸಮುವೇಲ 3:1

ಬಾಲಕನಾದ ಸಮುವೇಲನು ಏಲಿಯ ಮುಂದೆ ಕರ್ತನಿಗೆ ಸೇವೆ ಮಾಡಿಕೊಂಡಿ ದ್ದನು. ಆ ದಿನಗಳಲ್ಲಿ ಕರ್ತನ ವಾಕ್ಯವು ವಿರಳವಾಗಿತ್ತು; ಅಲ್ಲಿ ಪ್ರಕಟವಾದ ದೇವದರ್ಶನವಿರಲಿಲ್ಲ.

1 ಸಮುವೇಲ 3:15

ಸಮುವೇಲನು ಉದಯದವರೆಗೂ ಮಲಗಿದ್ದು ಕರ್ತನ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುವೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯ ಪಟ್ಟನು.

Interlinear

Choose Theme