Home Bibles 1 ಸಮುವೇಲ 17:53 · ಕನ್ನಡ ಬೈಬಲ್
1 ಸಮುವೇಲ 17:53 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರಿಗಿ ಬಂದು ಅವರ ಡೇರೆಗಳನ್ನು ಸೂರೆಮಾಡಿದರು.

Cross references

1 ಸಮುವೇಲ 19:5

ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.

2 ಸಮುವೇಲ 23:10

ಇವನು ಎದ್ದು ತನ್ನ ಕೈ ದಣಿದು ಕತ್ತಿಗೆ ಹತ್ತಿಕೊಳ್ಳುವ ವರೆಗೂ ಫಿಲಿಷ್ಟಿಯರನ್ನು ಹೊಡೆದುಬಿಟ್ಟನು. ಆ ದಿನ ಕರ್ತನು ದೊಡ್ಡ ರಕ್ಷಣೆಯನ್ನುಂಟು ಮಾಡಿದನು. ಜನರು ಸುಲು ಕೊಳ್ಳುವದಕ್ಕೆ ಮಾತ್ರ ಅವನ ಹಿಂದೆ ಹಿಂತಿರುಗಿದರು.

2 ಅರಸುಗಳು 7:7

ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ ಕುದುರೆಗಳನ್ನೂ ಕತ್ತೆಗಳನ್ನೂ ಬಿಟ್ಟು ಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋದರು.

ಯೆರೆಮಿಯ 4:20

ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.

ಯೆರೆಮಿಯ 30:16

ಕರ್ತನು ಹೀಗೆ ಹೇಳು ತ್ತಾನೆ--ನಿನ್ನ ಸ್ವರವನ್ನು ಅಳದ ಹಾಗೆಯೂ ಕಣ್ಣುಗಳು ಕಣ್ಣೀರು ಇಡದ ಹಾಗೆಯೂ ಬಿಗಿ ಹಿಡಿ; ನಿನ್ನ ಕೆಲಸಕ್ಕೆ ಪ್ರತಿಫಲ ಉಂಟೆಂದು ಕರ್ತನು ಅನ್ನುತ್ತಾನೆ; ಅವರು ಶತ್ರುವಿನ ದೇಶದಿಂದ ತಿರುಗಿ ಬರುವರು.

Interlinear

Choose Theme