Home Bibles 1 ಸಮುವೇಲ 11:14 · ಕನ್ನಡ ಬೈಬಲ್
1 ಸಮುವೇಲ 11:14 · ಕನ್ನಡ ಬೈಬಲ್

ಆಗ ಸಮುವೇಲನು ಜನರಿಗೆ--ನಾವು ಗಿಲ್ಗಾಲಿಗೆ ಹೋಗಿ ಅಲ್ಲಿ ರಾಜ್ಯವನ್ನು ನೂತನಪಡಿ ಸೋಣ ಬನ್ನಿರಿ ಅಂದನು.ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.

Cross references

1 ಸಮುವೇಲ 5:3

ಆದರೆ ಅಷ್ಡೋದ್ಯರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್‌ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು.

1 ಸಮುವೇಲ 7:16

ಅವನು ಪ್ರತಿವರುಷ ಹೊರಟು ಬೇತೇಲ್‌ ಗಿಲ್ಗಾಲ್‌ ಮಿಚ್ಪೆಯನ್ನೂ ಸುತ್ತಿಕೊಂಡುಹೋಗಿ ಆ ಸ್ಥಳಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.ಅವನು ರಾಮಕ್ಕೆ ತಿರಿಗಿ ಬರುತ್ತಿದ್ದನು. ಯಾಕಂದರೆ ಅಲ್ಲಿ ಅವನ ಮನೆ ಇತ್ತು; ಅಲ್ಲಿ ಇಸ್ರಾಯೇಲಿಗೆ ನ್ಯಾಯ ತೀರಿಸಿ ದನು; ಕರ್ತನಿಗೆ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು.

1 ಸಮುವೇಲ 10:8

ಆದರೆ ನೀನು ನನಗೆ ಮುಂದಾಗಿ ಗಿಲ್ಗಾಲಿಗೆ ಇಳಿದುಹೋಗಬೇಕು; ಇಗೋ, ನಾನು ದಹನಬಲಿಗಳನ್ನೂ ಸಮಾಧಾನದ ಬಲಿ ಗಳನ್ನೂ ಅರ್ಪಿಸುವದಕ್ಕಾಗಿ ನಿನ್ನ ಬಳಿಗೆ ಬರುವೆನು. ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವ ವರೆಗೂ ನೀನು ಅಲ್ಲಿ ಏಳು ದಿವಸ ಕಾದುಕೊಳ್ಳಬೇಕು ಅಂದನು.

1 ಸಮುವೇಲ 10:24

ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.

1 ದಿನವೃತ್ತಾಂತ 12:38

ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು.

Interlinear

Choose Theme