Home Bibles 1 ಅರಸುಗಳು 8:3 · ಕನ್ನಡ ಬೈಬಲ್
1 ಅರಸುಗಳು 8:3 · ಕನ್ನಡ ಬೈಬಲ್

ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಮಂಜೂಷವನ್ನು ಎತ್ತಿಕೊಂಡು ಕರ್ತನ ಮಂಜೂಷ ವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಾಮಾನುಗಳನ್ನೂ ತಂದರು.

Cross references

ಅಂಕೆಗಳ ಪುಸ್ತಕ 4:15

ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.

ಅಂಕೆಗಳ ಪುಸ್ತಕ 7:9

ಆದರೆ ಕೆಹಾತ್ಯರ ಕುಮಾರರಿಗೆ ಯಾವದನ್ನೂ ಕೊಡಲಿಲ್ಲ. ಅವರು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋಗುವದೇ ಪರಿಶುದ್ಧ ಸ್ಥಳದಲ್ಲಿ ಅವರಿಗೆ ಸಂಬಂಧಪಟ್ಟ ಸೇವೆಯಾಗಿತ್ತು.

ದ್ವಿತೀಯೋಪದೇಶಕಾಂಡ 31:9

ಇದಲ್ಲದೆ ಮೋಶೆಯು ಈ ನ್ಯಾಯಪ್ರಮಾಣವನ್ನು ಬರೆದು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಕುಮಾರರಾದ ಯಾಜಕರಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.

ಯೆಹೋಶುವ 3:3

ಜನರಿಗೆ ಆಜ್ಞಾಪಿಸಿ--ಯಾಜಕರಾದ ಲೇವಿಯರು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವದನ್ನು ನೋಡುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು.

ಯೆಹೋಶುವ 3:6

ಆಗ ಯೆಹೋಶುವನು ಯಾಜಕರಿಗೆ--ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹಾದುಹೋಗಿರಿ ಅಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋದರು.

ಯೆಹೋಶುವ 3:14

ಜನರು ಯೊರ್ದನನ್ನು ದಾಟಲು ತಮ್ಮ ಗುಡಾರ ಗಳಿಂದ ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಯೊರ್ದನಿನ ಬಳಿಗೆ ಬಂದರು.

ಯೆಹೋಶುವ 4:9

ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.

ಯೆಹೋಶುವ 6:6

ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ--ನೀವು ಒಡಂಬಡಿ ಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ; ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿ ಗಳನ್ನು ಕರ್ತನ ಮಂಜೂಷದ ಮುಂದೆ ಹಿಡುಕೊಂಡು ಹೋಗಲಿ ಅಂದನು.

2 ಸಮುವೇಲ 6:12

ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.

1 ದಿನವೃತ್ತಾಂತ 15:2

ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು.

1 ದಿನವೃತ್ತಾಂತ 15:11

ಆಗ ದಾವೀದನು ಚಾದೋಕ್‌, ಎಬ್ಯಾತ್ಯಾರ್‌ ಎಂಬ ಯಾಜಕರನ್ನೂ ಉರೀಯೇಲ್‌, ಅಸಾಯನು, ಯೋವೇಲನು, ಶೆಮಾಯನು, ಎಲೀಯೇಲನು, ಅವ್ಮೆಾನಾದಾಬ ಎಂಬ ಲೇವಿಯರನ್ನೂ ಕರೇಕಳುಹಿಸಿ ಅವರಿಗೆ ಹೇಳಿದ್ದೇನಂದರೆ--

2 ದಿನವೃತ್ತಾಂತ 5:5

ಒಡಂಬಡಿ ಕೆಯ ಮಂಜೂಷವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಪಾತ್ರೆಗಳನ್ನೂ ತಂದರು; ಇವುಗಳನ್ನು ಯಾಜಕರೂ ಲೇವಿಯರೂ ತಂದರು.

Interlinear

Choose Theme