ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.
Cross references
ಅದಕ್ಕೆ ಅವನು ಷಿಬಾ ಎಂದು ಹೆಸರಿಟ್ಟನು. ಆದದರಿಂದ ಇಂದಿನ ವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
ಯಾಕೋಬನು ಬೆಳಿಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನೆಟ್ಟು ಅದರ ಮೇಲೆ ಎಣ್ಣೆಯನ್ನು ಹೊಯ್ದನು.
ಕರ್ತನು ಮೋಶೆಗೆ--ಬೆಟ್ಟವನ್ನೇರಿ ನನ್ನ ಬಳಿಗೆ ಬಂದು ಅಲ್ಲೇ ಇರು. ನಾನು ನಿನಗೆ ಕಲ್ಲಿನ ಹಲಗೆಗಳನ್ನು ಅವರಿಗೆ ಕಲಿಸುವದಕ್ಕೋಸ್ಕರ ನಾನು ಬರೆದ ನ್ಯಾಯ ಪ್ರಮಾಣವನ್ನು ಆಜ್ಞೆಗೆಳನ್ನು ಕೊಡುವೆನು ಎಂದು ಹೇಳಿದನು.
ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳ ಹೆಸರುಗಳು ಳ್ಳವುಗಳಾಗಿ ಅವರ ಹೆಸರುಗಳ ಪ್ರಕಾರ ಅವು ಹನ್ನೆರಡಾ ಗಿರಬೇಕು. ಅವು ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಕುಲಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.
ಈ ಮಾತುಗಳನ್ನು ಯೆಹೋಶುವನು ದೇವರ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದು ಒಂದು ದೊಡ್ಡ ಕಲ್ಲನ್ನು ಎತ್ತಿ ಅದನ್ನು ಅಲ್ಲಿ ಕರ್ತನ ಪರಿಶುದ್ಧ ಸ್ಥಳದ ಬಳಿಯಲ್ಲಿ ಏಲಾಮರದ ಕೆಳಗೆ ನೆಟ್ಟನು.
ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈ ವರೆಗೂ ಅದಕ್ಕೆ ಅದೇ ಹೆಸರು.
ಸಮುವೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ ಶೇನಿಗೂ ಮಧ್ಯ ದಲ್ಲಿ ನಿಲ್ಲಿಸಿ--ಈವರೆಗೂ ಕರ್ತನು ನಮಗೆ ಸಹಾಯ ಮಾಡಿದ್ದಾನೆಂದು ಹೇಳಿ ಅದಕ್ಕೆ ಎಬೆನೆಜೆರ ಎಂದು ಹೆಸರಿಟ್ಟನು.
ಹಾಗೆಯೇ ಅವನು ಆ ದಿವಸ ಮೊದಲ್ಗೊಂಡು ಇಂದಿನ ವರೆಗೂ ಇರುವ ಹಾಗೆ ಇಸ್ರಾಯೇಲಿಗೆ ಅದನ್ನು ನಿಯಮವಾಗಿಯೂ ಕಟ್ಟಳೆಯಾಗಿಯೂ ಮಾಡಿದನು.
ಬೇರೋತ್ ಬೆನ್ಯಾವಿಾನನ ಪಾಲಿನಲ್ಲಿ ಲೆಖ್ಖಿಸಲ್ಪಟ್ಟಿತ್ತು. ಆದರೆ ಬೇರೋತ್ಯರು ಗಿತ್ತಾಯಿಮಿಗೆ ಓಡಿಹೋಗಿ ಇಂದಿನ ವರೆಗೂ ಅಲ್ಲಿ ಪ್ರವಾಸಿಗಳಾಗಿದ್ದಾರೆ.
ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವದೆಂದು ಕರ್ತನ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ
ಆಗ ಕೋಲುಗಳ ಕೊನೆಗಳು ದೈವೋಕ್ತಿಯ ಮುಂದೆ ಮಂಜೂಷದಿಂದ ಕಾಣಲ್ಪಡುವ ಹಾಗೆ ಕೋಲುಗಳನ್ನು ಎಳಕೊಂಡರು. ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅದು ಅಲ್ಲಿ ಇಂದಿನ ವರೆಗೂ ಇರು ತ್ತದೆ.
ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
ಈ ಕಾರಣದಿಂದ ಆ ಹೊಲವು ರಕ್ತದ ಹೊಲವೆಂದು ಈ ದಿನದ ವರೆಗೆ ಕರೆಯಲ್ಪಟ್ಟಿದೆ.
ಹೀಗೆ ಅವರು ಆ ಹಣವನ್ನು ತಕ್ಕೊಂಡು ತಮಗೆ ಕಲಿಸಿದ ಹಾಗೆ ಮಾಡಿದರು. ಈ ಮಾತು ಸಾಧಾರಣವಾಗಿ ಈ ದಿನದ ವರೆಗೂ ಯೆಹೂದ್ಯರ ಮಧ್ಯದಲ್ಲಿ ಹರಡಿ ಕೊಂಡಿದೆ.