ಹೀಗೆಯೇ ಹೀರಾಮನು ತೊಟ್ಟಿ ಗಳನ್ನೂ ಸಲಿಕೆಗಳನ್ನೂ ಪಾತ್ರೆಗಳನ್ನೂ ಮಾಡಿದನು. ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನು ಮಾಡಿಸಿದ ಎಲ್ಲಾ ಕೆಲಸಗಳನ್ನು ಮಾಡಿ ತೀರಿಸಿದನು.
Cross references
ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು.
ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.
ಈ ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ ಮಕ್ಕಳು ಅದರಂತೆಯೇ ಮಾಡಿದರು.
ಆ ಆಧಾರಗಳ ಮೇಲಿರುವ ಕೆಲಸ ಹೇಗಂದರೆ, ಅವುಗಳಿಗೆ ಅಂಚುಗಳಿದ್ದವು. ಅಂಚುಗಳು ಹಲಿಗೆಗಳ ನಡುವೆ ಇದ್ದವು.
ಮಡಕೆಗಳನ್ನೂ ಸಲಿಕೆ ಗಳನ್ನೂ ಕತ್ತರಿಗಳನ್ನೂ ಸೌಟುಗಳನ್ನೂ ಅವರು ಸೇವಿಸುತ್ತಿದ್ದ ಎಲ್ಲಾ ಹಿತ್ತಾಳೆಯ ಸಾಮಾನುಗಳನ್ನೂ ತಕ್ಕೊಂಡು ಹೋದರು.
ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು.
ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.