1 ಅರಸುಗಳು 7:39 · ಕನ್ನಡ ಬೈಬಲ್
ಮನೆಯ ಬಲ ಪಾರ್ಶ್ವದಲ್ಲಿ ಐದು ಆಧಾರಗಳನ್ನೂ ಮನೆಯ ಎಡಪಾರ್ಶ್ವದಲ್ಲಿ ಐದು ಆಧಾರಗಳನ್ನೂ ಇಟ್ಟನು. ಆದರೆ ಸಮುದ್ರವನ್ನು ಮನೆಯ ಪೂರ್ವ ಭಾಗದ ಬಲಪಾರ್ಶ್ವದಲ್ಲಿ ದಕ್ಷಿಣಕ್ಕೆ ದುರಾಗಿ ಇಟ್ಟನು.
Cross references
2 ದಿನವೃತ್ತಾಂತ 4:6
ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.
2 ದಿನವೃತ್ತಾಂತ 4:7
ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.
2 ದಿನವೃತ್ತಾಂತ 4:10
ಸಮುದ್ರವನ್ನು ತಾಮ್ರದಿಂದ ಹೊದಿಸಿ ದನು. ಸಮುದ್ರವನ್ನು ಪೂರ್ವ ಭಾಗದ ಬಲ ಪಾರ್ಶ್ವ ದಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
2 ದಿನವೃತ್ತಾಂತ 5:1
ಹೀಗೆ ಸೊಲೊಮೋನನು ಕರ್ತನ ಆಲಯಕ್ಕೊಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಸಿ ತನ್ನ ತಂದೆಯಾದ ದಾವೀದನು ಪ್ರತಿಷ್ಠೆ ಮಾಡಿದ್ದ ಬೆಳ್ಳಿಬಂಗಾರವನ್ನೂ ಎಲ್ಲಾ ಸಾಮಾನು ಗಳನ್ನೂ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.