ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೈರಡು ಮಂದಿ ಪ್ರಧಾನರಿಗೆ--ನೀವು ಹಿರಿಕಿರಿ ಯರ ಸಂಗಡ ಯುದ್ಧ ಮಾಡದೆ ಇಸ್ರಾಯೇಲಿನ ಅರಸನ ಸಂಗಡಲೇ ಯುದ್ಧಮಾಡಿರಿ ಎಂದು ಆಜ್ಞಾಪಿ ಸಿದನು.
Cross references
ಬಾಗಲಲ್ಲಿದ್ದ ಮನುಷ್ಯರನ್ನು ಕಿರಿಯರಿಂದ ಹಿರಿಯರ ವರೆಗೆ ಕುರುಡರನ್ನಾಗಿ ಮಾಡಿದರು. ಆಗ ಅವರು ಬಾಗಲನ್ನು ಕಂಡುಕೊಳ್ಳಲಾರದೆ ಬೇಸರಗೊಂಡರು.
ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರ ನ್ನಾದರೂ ಕಿರಿಯರನ್ನಾದರೂ ಕೊಂದುಹಾಕದೆ ಅವ ರನ್ನು ಸೆರೆಯಾಗಿ ತೆಗೆದುಕೊಂಡು ತಮ್ಮ ಮಾರ್ಗ ವಾಗಿ ಹೊರಟುಹೋದರು.
ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು.
ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿ ಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸುಗಳಿದ್ದರು. ಅವನು ಏರಿ ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧಮಾಡಿದನು.
ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.
ಇದಲ್ಲದೆ ನೀನು ಮಾಡ ಬೇಕಾದದ್ದೇನಂದರೆ -- ಅರಸುಗಳನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಅಧಿಪತಿಗಳನ್ನು ನೇಮಿಸಿ ನೀನು ಕಳಕೊಂಡ ಸೈನ್ಯದ ಹಾಗೆ ಕುದುರೆಗೆ ಕುದುರೆಯೂ ರಥಕ್ಕೆ ರಥವೂ ಬೇರೆ ಸೈನ್ಯವನ್ನು ಲೆಕ್ಕಿಸು;
ಈಗ ಆ ಮನುಷ್ಯರು ಅವನ ಮಾತಿನಲ್ಲಿ ಏನಾದರೂ ಬಂದೀತೆಂದು ಜಾಗ್ರೆತೆ ಯಿಂದ ನೋಡಿಕೊಂಡು ಅದನ್ನು ಅವಸರದಿಂದ ಹಿಡಿದರು. ಅವರು--ನಿನ್ನ ಸಹೋದರನಾದ ಬೆನ್ಹದ ದನು ಎಂದು ಹೇಳಿದರು. ಆಗ ಅವನು--ನೀವು ಹೋಗಿ ಅವನನ್ನು ಕರೆತನ್ನಿರಿ ಅಂದನು. ಬೆನ್ಹದದನು ಅವನ ಬಳಿಗೆ ಬಂದಾಗ ಅವನು ಇವನನ್ನು ರಥದ ಲ್ಲೇರ ಮಾಡಿದನು.
ಇವನು ಅವನಿಗೆ--ಕರ್ತನು ಹೇಳುವ ದೇನಂದರೆ--ನಾನು ಪೂರ್ಣನಾಶಕ್ಕೆ ಒಪ್ಪಿಸಿದ ಮನು ಷ್ಯನನ್ನು ನೀನು ಕೈಬಿಟ್ಟು ಹೋಗಗೊಡಿಸಿದ ಕಾರಣ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವೂ ಅವನ ಜನಕ್ಕೆ ಬದಲಾಗಿ ನಿನ್ನ ಜನವೂ ಹೋಗುವದು ಅಂದನು.ಆಗ ಇಸ್ರಾಯೇಲಿನ ಅರಸನು ವ್ಯಸನ ದಿಂದಲೂ ಕೋಪದಿಂದಲೂ ಸಮಾರ್ಯದಲ್ಲಿದ್ದ ತನ್ನ ಮನೆಗೆ ಹೊರಟು ಬಂದನು.
ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆನೀವು ಹಿರಿಕಿರಿಯರ ಸಂಗಡ ಯುದ್ಧಮಾಡದೆ ಇಸ್ರಾ ಯೇಲಿನ ಅರಸನ ಸಂಗಡವೇ ಯುದ್ಧಮಾಡಿರಿ ಎಂದು ಆಜ್ಞಾಪಿಸಿದ್ದನು.
ಅವನು ಅಡವಿಯಲ್ಲಿರುವ ಕುರುಚಲ ಗಿಡದ ಹಾಗಿರುವನು; ಒಳ್ಳೇದು ಬರುವಾಗ ನೋಡದೆ ಇರುವನು; ನಿವಾಸಿ ಗಳಿಲ್ಲದ ಚೌಳುನೆಲವಾಗಿರುವ ಅರಣ್ಯದ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.