Home Bibles 1 ಅರಸುಗಳು 20:24 · ಕನ್ನಡ ಬೈಬಲ್
1 ಅರಸುಗಳು 20:24 · ಕನ್ನಡ ಬೈಬಲ್

ಇದಲ್ಲದೆ ನೀನು ಮಾಡ ಬೇಕಾದದ್ದೇನಂದರೆ -- ಅರಸುಗಳನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಅಧಿಪತಿಗಳನ್ನು ನೇಮಿಸಿ ನೀನು ಕಳಕೊಂಡ ಸೈನ್ಯದ ಹಾಗೆ ಕುದುರೆಗೆ ಕುದುರೆಯೂ ರಥಕ್ಕೆ ರಥವೂ ಬೇರೆ ಸೈನ್ಯವನ್ನು ಲೆಕ್ಕಿಸು;

Cross references

1 ಅರಸುಗಳು 20:1

ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿ ಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸುಗಳಿದ್ದರು. ಅವನು ಏರಿ ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧಮಾಡಿದನು.

1 ಅರಸುಗಳು 20:16

ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.

1 ಅರಸುಗಳು 22:31

ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೈರಡು ಮಂದಿ ಪ್ರಧಾನರಿಗೆ--ನೀವು ಹಿರಿಕಿರಿ ಯರ ಸಂಗಡ ಯುದ್ಧ ಮಾಡದೆ ಇಸ್ರಾಯೇಲಿನ ಅರಸನ ಸಂಗಡಲೇ ಯುದ್ಧಮಾಡಿರಿ ಎಂದು ಆಜ್ಞಾಪಿ ಸಿದನು.

ಸಾಮೇತಿಗಳು 21:30

ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.

Interlinear

Choose Theme