Home Bibles 1 ಅರಸುಗಳು 21:2 · ಕನ್ನಡ ಬೈಬಲ್
1 ಅರಸುಗಳು 21:2 · ಕನ್ನಡ ಬೈಬಲ್

ಅಹಾ ಬನು ನಾಬೋತನಿಗೆ--ನಿನ್ನ ದ್ರಾಕ್ಷೇ ತೋಟವು ನನ್ನ ಮನೆಯ ಬಳಿಯಲ್ಲಿ ಇರುವದರಿಂದ ಅದು ನನಗೆ ಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು; ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೇ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು; ಇಲ್ಲವೆ ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿದ್ದರೆ ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು ಅಂದನು.

Cross references

ಆದಿಕಾಂಡ 3:6

ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.

ಆದಿಕಾಂಡ 16:6

ಆಗ ಅಬ್ರಾಮನು ಸಾರಯಳಿಗೆ--ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ; ನೀನು ಮೆಚ್ಚುವದನ್ನು ಮಾಡು ಅಂದನು. ಆಗ ಸಾರಯಳು ಅವಳನ್ನು ಬಾಧಿಸಿದ್ದರಿಂದ ಅವಳು ಸಾರಯಳ ಬಳಿಯಿಂದ ಓಡಿಹೋದಳು.

ನಿರ್ಗಮಕಾಂಡ 20:17

ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.

ದ್ವಿತೀಯೋಪದೇಶಕಾಂಡ 5:21

ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ; ನೆರೆಯವನ ಮನೆಯನ್ನೂ ಅವನ ಹೊಲವನ್ನೂ ದಾಸ ದಾಸಿಯರನ್ನೂ ಪಶು ಕತ್ತೆಗಳನ್ನೂ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬೇಡ ಎಂದು ಹೇಳಿದನು.

ದ್ವಿತೀಯೋಪದೇಶಕಾಂಡ 11:10

ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶವು ನೀನು ಹೊರಟ ಐಗುಪ್ತದೇಶದ ಹಾಗಲ್ಲ; ಅಲ್ಲಿ ನೀನು ನಿನ್ನ ಬೀಜವನ್ನು ಬಿತ್ತಿ ಪಲ್ಯಗಳ ತೋಟಕ್ಕೆ ಮಾಡುವ ಹಾಗೆ ನಿನ್ನ ಕಾಲಿನಿಂದ ನೀರು ಹಣಿಸಿದಿಯಲ್ಲಾ.

1 ಸಮುವೇಲ 8:6

ಆದರೆ--ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು ಎಂದು ಅವರು ಹೇಳಿದ ವಾರ್ತೆಯು ಸಮುವೇಲನಿಗೆ ಮನ ನೋಯಿಸುವಂತದ್ದಾಗಿತ್ತು. ಅವನು ಕರ್ತನಿಗೆ ಪ್ರಾರ್ಥನೆ ಮಾಡಿದನು.

1 ಸಮುವೇಲ 8:14

ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೇ ತೋಪುಗಳನ್ನೂ ತೆಗೆದು ಕೊಂಡು ತನ್ನ ಸೇವಕರಿಗೆ ಕೊಡುವನು.

1 ಸಮುವೇಲ 29:6

ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ--ನಿಜವಾಗಿಯೂ ಕರ್ತನಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವದು ನನ್ನ ದೃಷ್ಟಿಗೆ ಒಳ್ಳೇದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡದ್ದಿಲ್ಲ.

1 ಅರಸುಗಳು 21:6

ಅವನು ಅವಳಿಗೆ--ನಾನು ಇಜ್ರೇಲ್ಯನಾದ ನಾಬೋ ತನ ಸಂಗಡ ಮಾತನಾಡಿ--ನಿನ್ನ ದ್ರಾಕ್ಷೇ ತೋಟವನ್ನು ನನಗೆ ಕ್ರಯಕ್ಕೆ ಕೊಡು; ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷೇ ತೋಟವನ್ನು ಕೊಡು ವೆನು ಎಂದು ಅವನಿಗೆ ಹೇಳಿದೆನು. ಅದಕ್ಕವನುನನ್ನ ದ್ರಾಕ್ಷೇ ತೋಟವನ್ನು ಕೊಡುವದಿಲ್ಲ ಅಂದನು ಎಂದು ಹೇಳಿದನು.

2 ಅರಸುಗಳು 9:27

ಯೆಹೂದದ ಅರಸ ನಾದ ಅಹಜ್ಯನು ಇದನ್ನು ನೋಡಿದಾಗ ಅವನು ತೋಟದ ಮನೆಯ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ--ರಥದಲ್ಲಿ ಅವ ನನ್ನು ಸಹ ಸಂಹರಿಸಿರಿ ಅಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್‌ ಎಂಬ ಸ್ಥಳಕ್ಕೆ ಏರಿ ಹೋಗುವ ಮಾರ್ಗದಲ್ಲಿ ಹೊಡೆದರು. ಅವನು ಮೆಗಿದ್ದೋನಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.

ಸಭಾಪ್ರಸಂಗಿ 2:5

ಉದ್ಯಾನ ವನಗಳನ್ನೂ ಹಣ್ಣು ತೋಟಗಳನ್ನೂ ಮಾಡಿಕೊಂಡು ಅವುಗಳಲ್ಲಿ ತರತರವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು.

ಪರಮಗೀತ 4:15

ಸಮಸ್ತ ಮುಖ್ಯವಾದ ಸುಗಂಧದ್ರವ್ಯ ಗಳೂ ತೋಟಗಳ ಬುಗ್ಗೆಯೂ ಜೀವಜಲಗಳ ಬಾವಿಯೂ ಲೆಬನೋನಿನಿಂದ ಹರಿಯುವ ಕಾಲುವೆ ಗಳೂ ನಿನ್ನಲ್ಲಿ ಇವೆ.ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.

ಯೆರೆಮಿಯ 22:17

ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ.

ಹಬಕ್ಕೂಕ 2:9

ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!

ಲೂಕ 12:15

ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.

1 ತಿಮೋಥೆಯ 6:9

ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ.

ಯಾಕೋಬ 1:14

ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.

Interlinear

Choose Theme