Home Bibles 1 ಅರಸುಗಳು 17:14 · ಕನ್ನಡ ಬೈಬಲ್
1 ಅರಸುಗಳು 17:14 · ಕನ್ನಡ ಬೈಬಲ್

ಕರ್ತನು ಭೂಮಿಯ ಮೇಲೆ ಮಳೆಯನ್ನು ಕೊಡುವ ವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ; ತಂಬಿಗೆಯಲ್ಲಿರುವ ಎಣ್ಣೆಯು ಮುಗಿಯುವದಿಲ್ಲ ಎಂದು ಇಸ್ರಾಯೇಲಿನ ದೇವರಾದ ಕರ್ತನು ಹೇಳು ತ್ತಾನೆ ಅಂದನು.

Cross references

1 ಅರಸುಗಳು 17:4

ನೀನು ಆ ಹಳ್ಳದ ನೀರನ್ನು ಕುಡಿಯುವಿ; ನಿನಗೆ ಆಹಾರವನ್ನು ತಂದು ಕೊಡಲು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ ಎಂದು ಹೇಳಿದನು.

2 ಅರಸುಗಳು 3:16

ಅವನು ಹೇಳಿದ್ದೇನಂದರೆ -- ಈ ತಗ್ಗನ್ನು ಹಳ್ಳ ಕೊಳ್ಳಗಳಾಗಿ ಮಾಡಿರೆಂದು ಕರ್ತನು ಹೇಳುತ್ತಾನೆ.

2 ಅರಸುಗಳು 4:2

ಎಲೀ ಷನು ಅವಳಿಗೆ--ನಾನು ನಿನಗೆ ಏನು ಮಾಡಬೇಕು? ಮನೆಯಲ್ಲಿ ನಿನಗೆ ಏನು ಉಂಟು, ನನಗೆ ತಿಳಿಸು ಅಂದನು. ಅವಳು--ನಿನ್ನ ಸೇವಕಳಿಗೆ ಒಂದು ಮೊಗೆ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ ಅಂದಳು.

2 ಅರಸುಗಳು 4:42

ಇದಲ್ಲದೆ ಬಾಳ್‌ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.

2 ಅರಸುಗಳು 7:1

ಆಗ ಎಲೀಷನು--ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೀಗೆ ಹೇಳು ತ್ತಾನೆ -- ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಮಾರಲ್ಪಡುವವು ಅಂದನು.

2 ಅರಸುಗಳು 9:6

ಅವನು ಎದ್ದು ಮನೆಯೊಳಕ್ಕೆ ಹೋದನು. ಆಗ ಇವನು ಎಣ್ಣೆ ಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ ಹೇಳಿದ್ದು--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ, ಕರ್ತನ ಜನರಾದ ಇಸ್ರಾ ಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇ ಕಿಸಿದ್ದೇನೆ.

ಮತ್ತಾಯ 14:17

ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.

ಮತ್ತಾಯ 15:36

ಆತನು ಆ ಏಳು ರೊಟ್ಟಿಗಳನ್ನು ಮತ್ತು ಮಾನುಗಳನ್ನು ತಕ್ಕೊಂಡು ಸ್ತೋತ್ರಮಾಡಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.

Interlinear

Choose Theme