Home Bibles ☰ Books 1 ಕೊರಿಂಥದವರಿಗೆ 16:24 · ಕನ್ನಡ ಬೈಬಲ್
1 ಕೊರಿಂಥದವರಿಗೆ 16:24 · ಕನ್ನಡ ಬೈಬಲ್

ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿ ಇರಲಿ. ಆಮೆನ್‌.

Cross references

ಮತ್ತಾಯ 6:13

ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.

ಮತ್ತಾಯ 28:20

ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್‌.

1 ಕೊರಿಂಥದವರಿಗೆ 4:14

ನಿಮ್ಮನ್ನು ನಾಚಿಕೆಪಡಿಸುವದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮ್ಮನ್ನು ಎಚ್ಚರಿಸುವ ದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ.

1 ಕೊರಿಂಥದವರಿಗೆ 14:16

ಇದಲ್ಲದೆ ನೀನು ಆತ್ಮದಿಂದ ಸ್ತೋತ್ರ ಮಾಡುವಾಗ ತಿಳುವಳಿಕೆ ಯಿಲ್ಲದವನು ನೀನು ಮಾಡುವ ಕೃತಜ್ಞತಾಸ್ತುತಿಯನ್ನು ತಿಳಿಯದೆ ಇರುವದರಿಂದ ನೀನು ಹೇಳುವದಕ್ಕೆ ಆಮೆನ್‌ ಎಂದು ಹೇಳುವದು ಹೇಗೆ?

1 ಕೊರಿಂಥದವರಿಗೆ 16:14

ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.

2 ಕೊರಿಂಥದವರಿಗೆ 11:11

ಯಾಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ದೇವರೇ ಬಲ್ಲನು.

2 ಕೊರಿಂಥದವರಿಗೆ 12:15

ನಾನಂತೂ ನನಗಿರುವದನ್ನು ನಿಮಗೋಸ್ಕರ ಅತಿ ಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರಿ.

ಫಿಲಿಪ್ಪಿಯವರಿಗೆ 1:8

ಯೇಸು ಕ್ರಿಸ್ತನಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿ ಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ.

ಪ್ರಕಟನೆ 3:19

ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.

Interlinear

Choose Theme