ಹೀಗಿ ರಲಾಗಿ ನೀವು ಯಾವದರಲ್ಲಿಯೂ ಕೊರತೆಯಿಲ್ಲದವರಾಗಿದ್ದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣಕ್ಕಾಗಿ ಎದುರು ನೋಡುವವರಾಗಿದ್ದೀರಿ.
Cross references
ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ.
ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
ನೀವಂತೂ ತಮ್ಮ ಒಡೆಯನು ಮದುವೆಯಿಂದ ಯಾವಾಗ ಹಿಂದಿರುಗುವನೋ ಎಂದು ಕಾಯುವ ಮತ್ತು ಅವನು ಬಂದು ತಟ್ಟಿದಾಗ ತಕ್ಷಣವೇ ಅವನಿಗೆ ತೆರೆಯುವ ಮನುಷ್ಯರಂತೆ ಇರ್ರಿ.
ಮನುಷ್ಯಕುಮಾರನು ಪ್ರತ್ಯಕ್ಷನಾಗುವ ದಿನದಲ್ಲಿ ಹೀಗೆಯೇ ಇರುವದು.
ದೇವಪುತ್ರರ ಪ್ರತ್ಯಕ್ಷತೆಯನ್ನು ಸೃಷ್ಟಿಯು ಲವಲವಿಕೆಯಿಂದ ಎದುರು ನೋಡುತ್ತಾ ಇದೆ.
ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯ ದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ; ನಾನು ಮಾಡಿದ ಈ ಅನ್ಯಾಯವನ್ನು ಕ್ಷಮಿಸಿರಿ.
ನಾವಾದರೊ ಪರಲೋಕ ನಿವಾಸಿಗಳು; ಅಲ್ಲಿಂದಲೇ ರಕ್ಷಕನು ಬರುವದನ್ನು ಎದುರು ನೋಡುತ್ತಾ ಇದ್ದೇವೆ; ಆತನೇ ಕರ್ತನಾದ ಯೇಸು ಕ್ರಿಸ್ತನು.ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.
ನಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನ ಜೊತೆ ಯಲ್ಲಿ ಪ್ರಭಾವದಿಂದ ಕೂಡಿದವರಾಗಿ ಪ್ರತ್ಯಕ್ಷ ರಾಗುವಿರಿ.
ಇದಲ್ಲದೆ ಆತನು ಸತ್ತವರೊಳ ಗಿಂದ ಎಬ್ಬಿಸಿದಂಥ ಮತ್ತು ಪರಲೋಕದಿಂದ ಬರುವಂಥ ಆತನ ಕುಮಾರನನ್ನು ಎದುರು ನೋಡುವವರಾದಿರೆಂಬ ದನ್ನೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ಕೋಪದಿಂದ ನಮ್ಮನ್ನು ತಪ್ಪಿಸಿದನು.
ರ್ತನಾದ ಯೇಸು ತನ್ನ ಬಲವುಳ್ಳ ದೂತರೊಂದಿಗೆ ಪರಲೋಕ ದಿಂದ ಪ್ರತ್ಯಕ್ಷನಾಗುವಾಗ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನ ಮಾಡುವದೂ
ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.
ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.
ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.
ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.
ಆದದರಿಂದ ನೀವು ಮನಸ್ಸಿನ ನಡುವನ್ನು ಕಟ್ಟಿ ಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷ ನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನೀರಿಕ್ಷೆಯನ್ನು ಅಂತ್ಯದವರೆಗೆ ಇಡಿರಿ.
ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
ಪ್ರಿಯರೇ, ನಾವು ಈಗ ದೇವರ ಪುತ್ರರಾಗಿದ್ದೇವೆ, ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಆತನು ಪ್ರತ್ಯಕ್ಷ ನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು.
ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗೋಸ್ಕರ ಎದುರು ನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.