ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯ ದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ; ನಾನು ಮಾಡಿದ ಈ ಅನ್ಯಾಯವನ್ನು ಕ್ಷಮಿಸಿರಿ.
Cross references
ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
ಇಲ್ಲವೆ ಕೆಲಸಮಾಡದೆ ಇರುವದಕ್ಕೆ ನನಗೂ ಬಾರ್ನಬನಿಗೂ ಮಾತ್ರ ಅಧಿಕಾರವಿಲ್ಲವೇ?
ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ.
ಆದರೆ ಇವುಗಳಲ್ಲಿ ಒಂದನ್ನೂ ನಾನು ಉಪ ಯೋಗಿಸಲಿಲ್ಲ; ಇಲ್ಲವೆ ನನಗೆ ಹಾಗೆ ಆಗಲೆಂದು ನಾನು ಈ ವಿಷಯಗಳನ್ನು ಬರೆಯಲೂ ಇಲ್ಲ; ಯಾಕಂದರೆ ನಾನು ಹೆಚ್ಚಳಪಡುವದನ್ನು ಯಾವ ನಾದರೂ ವ್ಯರ್ಥ ಮಾಡುವದಕ್ಕಿಂತ ಸಾಯುವದೇ ನನಗೆ ಮೇಲು.
ನೀವು ಹೆಚ್ಚಿಸಲ್ಪಡಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದ್ದು ಅಪರಾಧವೋ?
ಇಗೋ, ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ; ನಾನು ನಿಮಗೆ ಭಾರವಾಗಿ ರುವದಿಲ್ಲ; ನಾನು ನಿಮ್ಮ ಸೊತ್ತನು ಆಶಿಸದೆ ನಿಮ್ಮನ್ನೇ ಆಶಿಸುತ್ತೇನೆ. ಯಾಕಂದರೆ ಮಕ್ಕಳು ತಂದೆತಾಯಿ ಗಳಿಗೋಸ್ಕರ ಆಸ್ತಿಯನ್ನು ಕೂಡಿಸಿಡುವದು ತಕ್ಕದ್ದಲ್ಲ, ತಂದೆತಾಯಿಗಳು ಮಕ