Home Bibles 1 ದಿನವೃತ್ತಾಂತ 9:16 · ಕನ್ನಡ ಬೈಬಲ್
1 ದಿನವೃತ್ತಾಂತ 9:16 · ಕನ್ನಡ ಬೈಬಲ್

ಯೆದೂತೂನನ ಮಗ ನಾದ ಗಾಲಾಲನ ಮಗನಾದ ಶೆಮಾಯನ ಮಗನಾದ ಓಬದ್ಯನೂ; ಎಲ್ಕಾನನ ಮಗನಾದ ಆಸನ ಮಗನಾದ ಬೆರೆಕ್ಯನೂ ಇವರು ನೆಟೋಫಾತದವರ ಊರುಗಳಲ್ಲಿ ವಾಸವಾಗಿದ್ದರು.

Cross references

1 ದಿನವೃತ್ತಾಂತ 2:54

ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್‌ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.

1 ದಿನವೃತ್ತಾಂತ 12:25

ಯುದ್ಧಕ್ಕೆ ಪರಾ ಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ ಏಳು ಸಾವಿರದ ನೂರು ಮಂದಿ.

1 ದಿನವೃತ್ತಾಂತ 25:1

ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್‌ ಹೇಮಾನ್‌ ಯೆದುತೂನ್‌ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು.

1 ದಿನವೃತ್ತಾಂತ 25:3

ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು.

1 ದಿನವೃತ್ತಾಂತ 25:6

ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು.

2 ದಿನವೃತ್ತಾಂತ 35:15

ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.

ನೆಹೆಮ್ಯ 7:26

ಬೇತ್ಲೆಹೇಮಿನವರೂ ನೆಟೋಫದವರೂ ನೂರ ಎಂಭತ್ತೆಂಟು ಮಂದಿಯು.

ನೆಹೆಮ್ಯ 11:17

ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು.

ನೆಹೆಮ್ಯ 12:28

ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿ ರುವ ಬೈಲಿನಿಂದಲೂ ನೆಟೋಫಾತ್ಯರ ಗ್ರಾಮಗ ಳಿಂದಲೂ

Interlinear

Choose Theme