Home Bibles 1 ದಿನವೃತ್ತಾಂತ 21:4 · ಕನ್ನಡ ಬೈಬಲ್
1 ದಿನವೃತ್ತಾಂತ 21:4 · ಕನ್ನಡ ಬೈಬಲ್

ಆದರೆ ಅರಸನ ಮಾತು ಯೋವಾಬನಿಗೆ ವಿರೋಧವಾಗಿ ಜಯಗೊಂಡಿತು. ಆಗ ಯೋವಾಬನು ಹೊರಟು ಇಸ್ರಾಯೇಲಿನ ಸಮಸ್ತ ದೇಶದ ಮೇಲೆ ಹೋಗಿ ಯೆರೂಸಲೇಮಿಗೆ ತಿರಿಗಿ ಬಂದು ದಾವೀದನಿಗೆ ಜನರ ಒಟ್ಟು ಲೆಕ್ಕವನ್ನು ಕೊಟ್ಟನು.

Cross references

ನಿರ್ಗಮಕಾಂಡ 1:17

ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತದ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.

2 ಸಮುವೇಲ 24:3

ಆಗ ಯೋವಾಬನು ಅರಸನಿಗೆ-- ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ನೋಡುವ ಹಾಗೆ ನಿನ್ನ ದೇವರಾದ ಕರ್ತನು ಈಗ ಇರುವದಕ್ಕಿಂತ ಜ ರನ್ನು ನೂರರಷ್ಟಾಗಿ ಹೆಚ್ಚು ಮಾಡಲಿ; ಆದರೆ ಅರಸ ನಾದ ನನ್ನ ಒಡೆಯನು ಈ ಕಾರ್ಯವನ್ನು ಆಶಿಸುವ ದೇನು ಅಂದನು. ಆದಾಗ್ಯೂ ಅರಸನ ಮಾತು ಯೋವಾಬನಿಗೂ ಸೈನ್ಯಾಧಿಪತಿಗಳಿಗೂ ವಿರೋಧವಾಗಿ ಪ್ರೇರೇಪಿಸಿತು.

2 ಸಮುವೇಲ 24:4

ಆಗ ಯೋವಾಬನೂ ಸೈನ್ಯಾಧಿಪತಿಗಳೂ ಇಸ್ರಾ ಯೇಲ್‌ ಜನರನ್ನು ಲೆಕ್ಕಿಸಲು ಅರಸನ ಸಮ್ಮುಖದಿಂದ ಹೊರಟು ಹೋದರು.

ಸಭಾಪ್ರಸಂಗಿ 8:4

ಅರಸನ ಮಾತು ಎಲ್ಲಿ ದೆಯೋ ಅಲ್ಲಿ ಶಕ್ತಿ ಇದೆ; ನೀನು ಏನು ಮಾಡು ತ್ತಿರುವೆ ಎಂದು ಅವನಿಗೆ ಹೇಳುವವನಾರು?

ದಾನಿಯೇಲ 3:18

ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.

ಅಪೋಸ್ತಲರ ಕೃತ್ಯಗಳು 5:29

ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.

Interlinear

Choose Theme