Home Bibles ☰ Books ಸಭಾಪ್ರಸಂಗಿ 8:4 · ಕನ್ನಡ ಬೈಬಲ್
ಸಭಾಪ್ರಸಂಗಿ 8:4 · ಕನ್ನಡ ಬೈಬಲ್

ಅರಸನ ಮಾತು ಎಲ್ಲಿ ದೆಯೋ ಅಲ್ಲಿ ಶಕ್ತಿ ಇದೆ; ನೀನು ಏನು ಮಾಡು ತ್ತಿರುವೆ ಎಂದು ಅವನಿಗೆ ಹೇಳುವವನಾರು?

Cross references

ನಿರ್ಗಮಕಾಂಡ 1:18

ಆಗ ಐಗು ಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿಯಾಕೆ ಇಂಥ ಕೆಲಸವನ್ನು ಮಾಡಿ ಗಂಡು ಮಕ್ಕಳನ್ನು ಬದುಕಿ ಸಿದ್ದೀರಿ ಅಂದನು.

2 ಸಮುವೇಲ 24:4

ಆಗ ಯೋವಾಬನೂ ಸೈನ್ಯಾಧಿಪತಿಗಳೂ ಇಸ್ರಾ ಯೇಲ್‌ ಜನರನ್ನು ಲೆಕ್ಕಿಸಲು ಅರಸನ ಸಮ್ಮುಖದಿಂದ ಹೊರಟು ಹೋದರು.

1 ಅರಸುಗಳು 1:30

ಅವನು ನನಗೆ ಬದಲಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ಇಸ್ರಾ ಯೇಲಿನ ದೇವರಾದ ಕರ್ತನ ಹೆಸರಿನಲ್ಲಿ ನಿನಗೆ ಹೇಗೆ ಆಣೆ ಇಟ್ಟು ಹೇಳಿದೆನೋ ಹಾಗೆಯೇ ಈ ದಿನ ನಿಶ್ಚಯವಾಗಿ ಮಾಡುವೆನೆಂದೂ ಸಮಸ್ತ ಇಕ್ಕಟ್ಟಿ ನೊಳಗಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದ ಮೇಲೆ ಆಣೆ ಇಡುತ್ತೇನೆಂದೂ ಪ್ರಮಾಣ ವಾಗಿ ಹೇಳುತ್ತೇನೆ.

1 ಅರಸುಗಳು 2:25

ಅರಸನಾದ ಸೊಲೊಮೋನನು ಯೆಹೋಯಾದಾವನ ಮಗನಾದ ಬೆನಾಯನನ್ನು ಕಳುಹಿಸಿದನು. ಇವನು ಅವನ ಮೇಲೆ ಬಿದದ್ದರಿಂದ ಅವನು ಸತ್ತುಹೋದನು.

1 ಅರಸುಗಳು 2:29

ಯೋವಾ ಬನು ಕರ್ತನ ಮಂದಿರಕ್ಕೆ ಓಡಿಹೋಗಿ ಇಗೋ, ಬಲಿಪೀಠದ ಬಳಿಯಲ್ಲಿ ಇದ್ದಾನೆಂಬ ಮಾತು ಅರಸ ನಾದ ಸೊಲೊಮೋನನಿಗೆ ತಿಳಿಸಲ್ಪಟ್ಟಿತು. ಆಗ ಸೊಲೊ ಮೋನನು ಯೆಹೋಯಾದಾವನ ಮಗನಾದ ಬೆನಾ ಯನಿಗೆ--ನೀನು ಹೋಗಿ ಅವನ ಮೇಲೆ ಬೀಳು ಅಂದನು.

1 ಅರಸುಗಳು 2:46

ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯ ನಿಗೆ ಆಜ್ಞಾಪಿಸಿದ್ದರಿಂದ ಅವನು ಹೊರಟು ಅವನ ಮೇಲೆ ಬಿದ್ದನು; ಅವನು ಸತ್ತನು. ಹೀಗೆ ರಾಜ್ಯವು ಸೊಲೊಮೋನನ ಕೈಯಲ್ಲಿ ಸ್ಥಿರ ಮಾಡಲ್ಪಟ್ಟಿತು.

ಎಜ್ರಾ 6:13

ಆಗ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಅವರ ಜೊತೆ ಗಾರರೂ ಅರಸನಾದ ದಾರ್ಯಾವೆಷನು ಕಳುಹಿ ಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು.

ಯೋಬ 9:12

ಇಗೋ, ಆತನು ತೆಗೆದುಕೊಂಡು ಹೋಗುತ್ತಾನೆ. ಆತನಿಗೆ ಅಡ್ಡಿಮಾಡುವವರು ಯಾರು? ಆತನನ್ನು--ನೀನು ಏನು ಮಾಡುತ್ತೀ ಎಂದು ಕೇಳುವ ವರಾರು?

ಯೋಬ 33:12

ಇಗೋ, ಈ ವಿಷಯವಾಗಿ ನೀನು ನೀತಿವಂತನಲ್ಲ; ನಾನು ನಿನಗೆ ಉತ್ತರ ಕೊಡುತ್ತೇನೆ; ಏನಂದರೆ ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನೆ.

ಯೋಬ 34:18

ಅರಸನಿಗೆ ದುಷ್ಟನೆಂದೂ ಪ್ರಧಾನರಿಗೆ ಬಲಹೀನರೆಂದೂ ಹೇಳುವದುಂಟೋ?

ಸಾಮೇತಿಗಳು 19:12

ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.

ಸಾಮೇತಿಗಳು 20:2

ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.

ಸಾಮೇತಿಗಳು 30:31

ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು.

ದಾನಿಯೇಲ 3:15

ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.

Interlinear

Choose Theme