ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು.
Cross references
ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್ ಆದ ಬಾಲಾಕ್ಕೂ
ಕಿರ್ಯತ್ಯಾರೀಮ್ ಎಂಬ ಕಿರ್ಯತ್‌ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
ಕಿರ್ಯತ್ಯಾರೀಮಿನ ಮನುಷ್ಯರು ಬಂದು ಕರ್ತನ ಮಂಜೂಷವನ್ನು ತಕ್ಕೊಂಡು ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟು ಕರ್ತನ ಮಂಜೂಷವನ್ನು ಕಾಯುವದ ಕ್ಕೋಸ್ಕರ ಅವನ ಕುಮಾರನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.
ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು.
ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು;
ಯೆಹೂದನ ಕುಮಾರರು--ಪೇರಚನು, ಹೆಚ್ರೋನನು, ಕರ್ವಿಾಯು, ಹೂರನು, ಶೋಬಾಲನು.
ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
ಹೀಗೆ ದೇವರ ಮಂಜೂಷವನ್ನು ಕಿರ್ಯತ್ಯಾರೀ ಮಿನಿಂದ ತರುವದಕ್ಕೆ ದಾವೀದನು ಐಗುಪ್ತದ ಶೀಹೋರ್ ಮೊದಲುಗೊಂಡು ಹಮಾತಿನ ಪ್ರದೇ ಶದ ವರೆಗೆ ಇರುವ ಸಮಸ್ತ ಇಸ್ರಾಯೇಲ್ಯರನ್ನು ಕೂಡಿಸಿ ದನು.