ಹದರೆಜರನ ಸೇವಕರು ತಾವು ಇಸ್ರಾ ಯೇಲಿನ ಮುಂದೆ ಸೋಲಿಸಲ್ಪಟ್ಟದ್ದನ್ನು ಕಂಡಾಗ ಅವರು ದಾವೀದನ ಸಂಗಡ ಸಮಾಧಾನ ಮಾಡಿ ಕೊಂಡು ಅವನ ಸೇವಕರಾದರು. ತರುವಾಯ ಅರಾ ಮ್ಯರು ಅಮ್ಮೋನಿಯರಿಗೆ ಇನ್ನು ಸಹಾಯ ಮಾಡಲು ಮನಸ್ಸಿಲ್ಲದೆ ಇದ್ದರು.
Cross references
ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.
ಅವರು ಅವನಿಗೆ--ನಿಮ್ಮ ದೇವರಾದ ಕರ್ತನ ಹೆಸರಿಗೋಸ್ಕರ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದೆವು. ಯಾಕಂದರೆ ಆತನ ಕೀರ್ತಿಯನ್ನೂ ಆತನು ಐಗುಪ್ತದಲ್ಲಿ ಮಾಡಿದ ಎಲ್ಲವನ್ನೂ
ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು.
ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.
ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿ ಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸುಗಳಿದ್ದರು. ಅವನು ಏರಿ ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧಮಾಡಿದನು.
ಅವನೂ ರಾಜರೂ ಅವನ ಜೊತೆ ಡೇರೆಗಳಲ್ಲಿ ಕುಡಿಯುತ್ತಿರಲು ಈ ವಾರ್ತೆಯನ್ನು ಕೇಳುತ್ತಲೇ ಅವನು ತನ್ನ ಸೇವಕರಿಗೆ--ಸಿದ್ಧಮಾಡಿರಿ ಅಂದನು. ಹಾಗೆಯೆ ಪಟ್ಟಣಕ್ಕೆ ವಿರೋಧವಾಗಿ ಯುದ್ಧಕ್ಕೆ ಸಿದ್ಧಮಾಡಿದರು.
ದಾವೀದನ ಕೀರ್ತಿಯು ಸಮಸ್ತ ದೇಶಗಳಿಗೆ ಹರಡಿತು; ಕರ್ತನು ಅವನ ಭಯವನ್ನು ಸಮಸ್ತ ಜನಾಂಗಗಳ ಮೇಲೆ ಬರಮಾಡಿದನು.
ನೀನು ಯುದ್ಧಕಾಗ್ಕಿ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಎದುರಾಳಿಗ ಳನ್ನು ಅಧೀನ ಮಾಡಿದಿ.
ನನ್ನ ಮಾತನ್ನು ಕೇಳಿದೊಡನೆ ಅವರು ನನಗೆ ವಿಧೇಯ ರಾಗುವರು.
ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.
ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?