Home Bibles 1 ದಿನವೃತ್ತಾಂತ 19:18 · ಕನ್ನಡ ಬೈಬಲ್
1 ದಿನವೃತ್ತಾಂತ 19:18 · ಕನ್ನಡ ಬೈಬಲ್

ಆದರೆ ಅರಾಮ್ಯರು ಇಸ್ರಾಯೇಲಿನ ಎದುರಿನಿಂದ ಓಡಿಹೋದರು. ದಾವೀದನು ಅರಾಮ್ಯರಲ್ಲಿ ಏಳು ಸಾವಿರ ರಥವುಳ್ಳವರನ್ನೂ ನಾಲ್ವತ್ತು ಸಾವಿರ ಕಾಲಾಳು ಗಳನ್ನೂ ಸೈನ್ಯಾಧಿಪತಿಯಾದ ಶೋಫಕನನ್ನೂ ಕೊಂದು ಹಾಕಿದನು.ಹದರೆಜರನ ಸೇವಕರು ತಾವು ಇಸ್ರಾ ಯೇಲಿನ ಮುಂದೆ ಸೋಲಿಸಲ್ಪಟ್ಟದ್ದನ್ನು ಕಂಡಾಗ ಅವರು ದಾವೀದನ ಸಂಗಡ ಸಮಾಧಾನ ಮಾಡಿ ಕೊಂಡು ಅವನ ಸೇವಕರಾದರು. ತರುವಾಯ ಅರಾ ಮ್ಯರು ಅಮ್ಮೋನಿಯರಿಗೆ ಇನ್ನು ಸಹಾಯ ಮಾಡಲು ಮನಸ್ಸಿಲ್ಲದೆ ಇದ್ದರು.

Cross references

2 ಸಮುವೇಲ 10:18

ಆಗ ಅರಾಮ್ಯರು ಇಸ್ರಾಯೇಲ್ಯರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ಮಂದಿ ಸಾರಥಿಗಳನ್ನೂ ನಾಲ್ವತ್ತು ಸಾವಿರ ಕುದುರೆ ರಾಹುತ ರನ್ನೂ ಕೊಂದು ಅವರ ಸೈನ್ಯದ ಯಜಮಾನನಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಸತ್ತನು.ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.

1 ದಿನವೃತ್ತಾಂತ 19:13

ಧೈರ್ಯವಾಗಿರು; ನಾವು ನಮ್ಮ ಜನರಿಗೋಸ್ಕ ರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲ ಗೊಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು.

ಕೀರ್ತನೆಗಳು 18:32

ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಮಾರ್ಗವನ್ನು ಸಂಪೂರ್ಣ ಮಾಡುವ ದೇವರು ಆತನೇ.

ಕೀರ್ತನೆಗಳು 33:16

ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ.

ಕೀರ್ತನೆಗಳು 46:11

ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

Interlinear

Choose Theme