1 ದಿನವೃತ್ತಾಂತ 16:24 · ಕನ್ನಡ ಬೈಬಲ್
ಜನಾಂಗಗಳಲ್ಲಿ ಆತನ ಘನವನ್ನೂ ಎಲ್ಲಾ ಜನಗಳಲ್ಲಿ ಆತನ ಅದ್ಭುತಗಳನ್ನೂ ಪ್ರಕಟಿಸಿರಿ.
Cross references
2 ಅರಸುಗಳು 19:19
ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.
1 ದಿನವೃತ್ತಾಂತ 16:9
ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ.
ಕೀರ್ತನೆಗಳು 22:27
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಕೀರ್ತನೆಗಳು 26:7
ನನ್ನ ಕೈಗಳನ್ನು ನಿರ್ಮಲ ತ್ವದಲ್ಲಿ ತೊಳೆದು, ನಿನ್ನ ಬಲಿಪೀಠವನ್ನು ಸುತ್ತುವೆನು.
ಯೆಶಾಯ 12:2
ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ.
ದಾನಿಯೇಲ 4:1
ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ--ನಿಮಗೆ ಶಾಂತಿಯು ಹೆಚ್ಚಾಗಲಿ.