Home Bibles 1 ದಿನವೃತ್ತಾಂತ 16:23 · ಕನ್ನಡ ಬೈಬಲ್
1 ದಿನವೃತ್ತಾಂತ 16:23 · ಕನ್ನಡ ಬೈಬಲ್

ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ.

Cross references

ನಿರ್ಗಮಕಾಂಡ 15:21

ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.

1 ದಿನವೃತ್ತಾಂತ 16:9

ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ.

ಕೀರ್ತನೆಗಳು 30:4

ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.

ಕೀರ್ತನೆಗಳು 40:10

ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.

ಕೀರ್ತನೆಗಳು 71:15

ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.

ಕೀರ್ತನೆಗಳು 96:1

ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ.

ಯೆಶಾಯ 12:5

ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.

ಯೆಶಾಯ 51:6

ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಯಾಕಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವವು, ಭೂಮಿಯು ಹಳೆಯ ಬಟ್ಟೆಯಂತಾಗುವದು. ಅದರಲ್ಲಿ ವಾಸಿಸುವ ವರು ಅದೇ ರೀತಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವದು ಮತ್ತು ನನ್ನ ನೀತಿಯು ಎಂದಿಗೂ ರದ್ದಾಗದು.

Interlinear

Choose Theme