Home Bibles 1 ದಿನವೃತ್ತಾಂತ 11:17 · ಕನ್ನಡ ಬೈಬಲ್
1 ದಿನವೃತ್ತಾಂತ 11:17 · ಕನ್ನಡ ಬೈಬಲ್

ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು.

Cross references

ಅಂಕೆಗಳ ಪುಸ್ತಕ 11:4

ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್‌ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು?

2 ಸಮುವೇಲ 23:15

ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವ ವನಾರೆಂದು ಬಹು ಆಶೆಯಿಂದ ಹೇಳಿದನು.

ಕೀರ್ತನೆಗಳು 42:1

ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.

ಕೀರ್ತನೆಗಳು 60:9

ಬಲವುಳ್ಳ ಪಟ್ಟಣಕ್ಕೆ ನನ್ನನ್ನು ಕರತರುವವನಾರು? ಎದೋಮಿನೊಳಗೆ ನನ್ನನ್ನು ನಡಿಸುವವನಾರು?

ಕೀರ್ತನೆಗಳು 63:1

ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.

ಕೀರ್ತನೆಗಳು 143:6

ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.

ಯೆಶಾಯ 12:3

ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.

ಯೋಹಾನ 4:10

ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು.

ಯೋಹಾನ 4:14

ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.

Interlinear

Choose Theme