Home
Bibles
Bible Study with Steffi
Parallel ನಿರ್ಗಮಕಾಂಡ 16
Aa
Parallel ನಿರ್ಗಮಕಾಂಡ
Chapter 16
ಕನ್ನಡ ಬೈಬಲ್ · World English Bible
Change versions
Left Bible
Bible in Basic English
King James Version
New King James Version
World English Bible
Young's Literal Translation
বাংলা বাইবেল
ગુજરાતી બાઇબલ
हिन्दी बाइबिल
ಕನ್ನಡ ಬೈಬಲ್
മലയാളം ബൈബിൾ
मराठी बायबल
नेपाली बाइबल
ଓଡ଼ିଆ ବାଇବେଲ
தமிழ் பரிசுத்த வேதாகமம்
తెలుగు బైబిల్
Right Bible
Bible in Basic English
King James Version
New King James Version
World English Bible
Young's Literal Translation
বাংলা বাইবেল
ગુજરાતી બાઇબલ
हिन्दी बाइबिल
ಕನ್ನಡ ಬೈಬಲ್
മലയാളം ബൈബിൾ
मराठी बायबल
नेपाली बाइबल
ଓଡ଼ିଆ ବାଇବେଲ
தமிழ் பரிசுத்த வேதாகமம்
తెలుగు బైబిల్
Back to ಕನ್ನಡ ಬೈಬಲ್ chapter
Back to World English Bible chapter
ಕನ್ನಡ ಬೈಬಲ್
World English Bible
1
ತರುವಾಯ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತದೇಶದಿಂದ ಹೊರಟ ಎರಡ ನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ ಸೀನಾಯಿಗೂ ಮಧ್ಯೆ ಇರುವ ಸೀನ್ ಅರಣ್ಯಕ್ಕೆ ಬಂದರು.
1
They took their journey from Elim, and all the congregation of the children of Israel came to the wilderness of Sin, which is between Elim and Sinai, on the fifteenth day of the second month after their departing out of the land of Egypt.
2
ಆಗ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು.
2
The whole congregation of the children of Israel murmured against Moses and against Aaron in the wilderness;
3
ಇಸ್ರಾಯೇಲ್ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು.
3
and the children of Israel said to them, "We wish that we had died by the hand of Yahweh in the land of Egypt, when we sat by the flesh-pots, when we ate our fill of bread, for you have brought us out into this wilderness, to kill this whole assembly with hunger."
4
ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ.
4
Then said Yahweh to Moses, "Behold, I will rain bread from the sky for you, and the people shall go out and gather a day's portion every day, that I may test them, whether they will walk in my law, or not.
5
ಆರನೆಯ ದಿವಸದಲ್ಲಿ ಅವರು ತಂದದ್ದನ್ನು ಸಿದ್ಧಮಾಡುವಾಗ ಪ್ರತಿದಿನದಲ್ಲಿ ಕೂಡಿಸು ವದಕ್ಕಿಂತ ಎರಡರಷ್ಟಾಗಿರುವದು ಎಂದು ಹೇಳಿದನು.
5
It shall come to pass on the sixth day, that they shall prepare that which they bring in, and it shall be twice as much as they gather daily."
6
ಆಗ ಮೋಶೆ ಆರೋನರು ಇಸ್ರಾಯೇಲ್ ಮಕ್ಕಳಿ ಗೆಲ್ಲಾ--ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದಾತನು ಕರ್ತನೇ ಎಂದು ಸಾಯಂಕಾಲವಾ ದಾಗ ನಿಮಗೆ ತಿಳಿಯುವದು.
6
Moses and Aaron said to all the children of Israel, "At evening, then you shall know that Yahweh has brought you out from the land of Egypt;
7
ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು.
7
and in the morning, then you shall see the glory of Yahweh; because he hears your murmurings against Yahweh. Who are we, that you murmur against us?"
8
ಆಗ ಮೋಶೆಯು--ಸಾಯಂಕಾಲದಲ್ಲಿ ಕರ್ತನು ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಕರ್ತನಿಗೆ ಕೇಳಿಸಿದವು. ಆ ಗುಣುಗುಟ್ಟುವಿಕೆಯು ಕರ್ತನಿಗೇ ಹೊರತು ನಮ ಗಲ್ಲ. ನಾವು ಎಷ್ಟು ಮಾತ್ರದವರು ಅಂದನು.
8
Moses said, "Now Yahweh shall give you meat to eat in the evening, and in the morning bread to satisfy you; because Yahweh hears your murmurings which you murmur against him. And who are we? Your murmurings are not against us, but against Yahweh."
9
ಮೋಶೆಯು ಆರೋನನಿಗೆ--ನೀನು ಇಸ್ರಾ ಯೇಲ್ ಮಕ್ಕಳ ಸಭೆಗೆಲ್ಲಾ--ನಿಮ್ಮ ಗುಣುಗುಟ್ಟುವಿಕೆ ಯನ್ನು ಕರ್ತನು ಕೇಳಿದ್ದರಿಂದ ನೀವು ಆತನ ಸವಿಾಪಕ್ಕೆ ಆತನ ಮುಂದೆ ಬನ್ನಿರಿ ಎಂದು ಹೇಳು ಅಂದನು.
9
Moses said to Aaron, "Tell all the congregation of the children of Israel, 'Come near before Yahweh, for he has heard your murmurings.'"
10
ಆರೋನನು ಇಸ್ರಾಯೇಲ್ ಮಕ್ಕಳ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಅರಣ್ಯದ ಕಡೆಗೆ ನೋಡಿ ದರು. ಆಗ ಇಗೋ, ಕರ್ತನ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.
10
It happened, as Aaron spoke to the whole congregation of the children of Israel, that they looked toward the wilderness, and, behold, the glory of Yahweh appeared in the cloud.
11
ಆಗ ಕರ್ತನು ಮೋಶೆಯ ಸಂಗಡ ಮಾತ ನಾಡಿ--
11
Yahweh spoke to Moses, saying,
12
ಇಸ್ರಾಯೇಲ್ ಮಕ್ಕಳ ಗುಣುಗುಟ್ಟು ವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತ ನಾಡಿ--ನೀವು ಸಾಯಂಕಾಲದಲ್ಲಿ ಮಾಂಸವನ್ನು ಉಣ್ಣು ವಿರಿ, ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ಅವರಿಗೆ ಹೇಳು ಅಂದನು.
12
"I have heard the murmurings of the children of Israel. Speak to them, saying, 'At evening you shall eat meat, and in the morning you shall be filled with bread: and you shall know that I am Yahweh your God.'"
13
ಸಾಯಂಕಾಲದಲ್ಲಿ ಆದದ್ದೇನಂದರೆ--ಲಾವಕ್ಕಿ ಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು; ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.
13
It happened at evening that quail came up and covered the camp; and in the morning the dew lay around the camp.
14
ಬಿದ್ದಿದ್ದ ಮಂಜು ಹೋದ ಮೇಲೆ ಇಗೋ, ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು.
14
When the dew that lay had gone, behold, on the surface of the wilderness was a small round thing, small as the hoar-frost on the ground.
15
ಇಸ್ರಾಯೇಲ್ ಮಕ್ಕಳು ಅದನ್ನು ನೋಡಿದಾಗ ಅವರು ಒಬ್ಬರಿಗೊಬ್ಬರು--ಇದು ಮನ್ನಾ ಅಂದರು. ಯಾಕಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ--ಕರ್ತನು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ ಎಂದು ಹೇಳಿದನು.
15
When the children of Israel saw it, they said one to another, "What is it?" For they didn't know what it was. Moses said to them, "It is the bread which Yahweh has given you to eat."
16
ಕರ್ತನು ಆಜ್ಞಾಪಿಸಿದ್ದೇನಂದರೆ--ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ, ಪ್ರತಿಯೊಬ್ಬನಿಗೆ ಒಂದು ಓಮೆರದಂತೆ ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತಕ್ಕೊಳ್ಳಿರಿ ಎಂದು ಹೇಳಿದನು.
16
This is the thing which Yahweh has commanded: "Gather of it everyone according to his eating; an omer a head, according to the number of your persons, shall you take it, every man for those who are in his tent."
17
ಇಸ್ರಾಯೇಲ್ ಮಕ್ಕಳು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.
17
The children of Israel did so, and gathered some more, some less.
18
ಓಮೆರ ದಿಂದ ಅಳತೆ ಮಾಡಿದಾಗ ಹೆಚ್ಚು ಕೂಡಿಸಿದವನಿಗೆ ಮಿಕ್ಕಲಿಲ್ಲ, ಕಡಿಮೆ ಕೂಡಿಸಿದವನಿಗೆ ಕೊರತೆಯಾ ಗಲಿಲ್ಲ, ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು.
18
When they measured it with an omer, he who gathered much had nothing over, and he who gathered little had no lack. They gathered every man according to his eating.
19
ಮೋಶೆ ಅವರಿಗೆ--ಇದರಲ್ಲಿ ಯಾರೂ ಮರುದಿನದ ವರೆಗೆ ಇಟ್ಟುಕೊಳ್ಳಬಾರದು ಎಂದು ಹೇಳಿದನು.
19
Moses said to them, "Let no one leave of it until the morning."
20
ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನ ವರೆಗೆ ಇಟ್ಟುಕೊಂಡಾಗ ಅದು ಹುಳಬಿದ್ದು ನಾತ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿ ಕೊಂಡನು.
20
Notwithstanding they didn't listen to Moses, but some of them left of it until the morning, and it bred worms, and became foul: and Moses was angry with them.
21
ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನು ವಷ್ಟು ಪ್ರತಿ ದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.
21
They gathered it morning by morning, everyone according to his eating. When the sun grew hot, it melted.
22
ಆರನೆಯ ದಿನದಲ್ಲಿ ಅವರು ಎರಡರಷ್ಟು ರೊಟ್ಟಿ ಯನ್ನು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು.
22
It happened that on the sixth day they gathered twice as much bread, two omers for each one, and all the rulers of the congregation came and told Moses.
23
ಅವನು ಅವರಿಗೆ--ಕರ್ತನು ಹೇಳಿದ ಮಾತು ಇದೇ--ನಾಳೆ ಕರ್ತನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ್ ದಿನವಾಗಿದೆ, ಇಂದೇ ಸುಡಬೇಕಾ ದದ್ದನ್ನು ಸುಡಿರಿ, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನ ವರೆಗೆ ಇಟ್ಟು ಕೊಳ್ಳಿರಿ ಅಂದನು.
23
He said to them, "This is that which Yahweh has spoken, 'Tomorrow is a solemn rest, a holy Sabbath to Yahweh. Bake that which you want to bake, and boil that which you want to boil; and all that remains over lay up for yourselves to be kept until the morning."
24
ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರು ದಿನದ ವರೆಗೆ ಇಟ್ಟುಕೊಂಡಾಗ ಅದು ನಾತಹಿಡಿಯಲಿಲ್ಲ. ಅದರಲ್ಲಿ ಹುಳಗಳೂ ಇರ ಲಿಲ್ಲ.
24
They laid it up until the morning, as Moses asked, and it didn't become foul, neither was there any worm in it.
25
ಆಗ ಮೋಶೆಯು--ಈ ಹೊತ್ತು ಅದನ್ನು ಊಟಮಾಡಿರಿ, ಯಾಕಂದರೆ ಈ ದಿನವು ಕರ್ತನ ಸಬ್ಬತ್ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ (ಆಹಾರ) ಸಿಕ್ಕುವದಿಲ್ಲ.
25
Moses said, "Eat that today, for today is a Sabbath to Yahweh. Today you shall not find it in the field.
26
ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವ ದರಿಂದ ಅಂದು (ರೊಟ್ಟಿಯು) ಇರುವದಿಲ್ಲ ಅಂದನು.
26
Six days you shall gather it, but on the seventh day is the Sabbath. In it there shall be none."
27
ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವದಕ್ಕೆ ಹೊರಗೆ ಹೋದಾಗ ಅವರಿಗೆ ಸಿಕ್ಕಲಿಲ್ಲ.
27
It happened on the seventh day, that some of the people went out to gather, and they found none.
28
ಆಗ ಕರ್ತನು ಮೋಶೆಗೆ--ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ ನ್ಯಾಯಪ್ರಮಾಣಗಳನ್ನೂ ಕೈಕೊಳ್ಳದೆ ನಿರಾಕರಿಸುವಿರಿ ಅಂದನು.
28
Yahweh said to Moses, "How long do you refuse to keep my commandments and my laws?
29
ಅವನು--ನೋಡಿರಿ, ಕರ್ತನು ನಿಮಗೆ ಸಬ್ಬತ್ ದಿನವನ್ನು ಕೊಟ್ಟಿದ್ದರಿಂದಲೇ ಆರನೆಯ ದಿನ ದಲ್ಲಿ ನಿಮಗೆ ಎರಡು ದಿನಗಳ ರೊಟ್ಟಿಯನ್ನು ಕೊಟ್ಟಿ ದ್ದಾನೆ. ಪ್ರತಿಯೊಬ್ಬನು ತನ್ನ ತನ್ನ ಸ್ಥಳದಲ್ಲಿ ಇರಲಿ, ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಹೇಳಿದನು.
29
Behold, because Yahweh has given you the Sabbath, therefore he gives you on the sixth day the bread of two days. Everyone stay in his place. Let no one go out of his place on the seventh day."
30
ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.
30
So the people rested on the seventh day.
31
ಆಗ ಇಸ್ರಾಯೇಲ್ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.
31
The house of Israel called the name of it Manna, and it was like coriander seed, white; and its taste was like wafers with honey.
32
ಮೋಶೆಯು ಅವರಿಗೆ--ಕರ್ತನು ಆಜ್ಞಾಪಿಸಿದ್ದು ಇದೇ--ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಡಿಸಿದಾಗ ಅರಣ್ಯದಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ (ಮನ್ನವನ್ನು) ತುಂಬಿಸಿ ಇಟ್ಟಿರಬೇಕು ಎಂಬದು ಅಂದನು.
32
Moses said, "This is the thing which Yahweh has commanded, 'Let an omer-full of it be kept throughout your generations, that they may see the bread with which I fed you in the wilderness, when I brought you forth from the land of Egypt."
33
ಮೋಶೆಯು ಆರೋನನಿಗೆ--ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಗಳಿಗೋಸ್ಕರ ಇಟ್ಟು ಕೊಳ್ಳುವದಕ್ಕಾಗಿ ಕರ್ತನ ಮುಂದೆ ಇಡು ಅಂದನು.
33
Moses said to Aaron, "Take a pot, and put an omer-full of manna in it, and lay it up before Yahweh, to be kept throughout your generations."
34
ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು.
34
As Yahweh commanded Moses, so Aaron laid it up before the Testimony, to be kept.
35
ಇಸ್ರಾಯೇಲ್ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
35
The children of Israel ate the manna forty years, until they came to an inhabited land. They ate the manna until they came to the borders of the land of Canaan.
36
ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
36
Now an omer is the tenth part of an ephah.
Choose Theme