Home
Bibles
Bible Study with Steffi
Parallel 1 ಸಮುವೇಲ 20
Aa
Parallel 1 ಸಮುವೇಲ
Chapter 20
ಕನ್ನಡ ಬೈಬಲ್ · World English Bible
Change versions
Left Bible
Bible in Basic English
King James Version
New King James Version
World English Bible
Young's Literal Translation
বাংলা বাইবেল
ગુજરાતી બાઇબલ
हिन्दी बाइबिल
ಕನ್ನಡ ಬೈಬಲ್
മലയാളം ബൈബിൾ
मराठी बायबल
नेपाली बाइबल
ଓଡ଼ିଆ ବାଇବେଲ
தமிழ் பரிசுத்த வேதாகமம்
తెలుగు బైబిల్
Right Bible
Bible in Basic English
King James Version
New King James Version
World English Bible
Young's Literal Translation
বাংলা বাইবেল
ગુજરાતી બાઇબલ
हिन्दी बाइबिल
ಕನ್ನಡ ಬೈಬಲ್
മലയാളം ബൈബിൾ
मराठी बायबल
नेपाली बाइबल
ଓଡ଼ିଆ ବାଇବେଲ
தமிழ் பரிசுத்த வேதாகமம்
తెలుగు బైబిల్
Back to ಕನ್ನಡ ಬೈಬಲ್ chapter
Back to World English Bible chapter
ಕನ್ನಡ ಬೈಬಲ್
World English Bible
1
ದಾವೀದನು ರಾಮದ ನಯೋತಿನಿಂದ ಓಡಿಹೋಗಿ ಯೋನಾತಾನನ ಬಳಿಗೆ ಬಂದು ಅವನ ಮುಂದೆ--ನಾನು ಏನು ಮಾಡಿದೆನು? ನನ್ನ ಅಕ್ರಮವೇನು? ನಿನ್ನ ತಂದೆಯು ನನ್ನ ಪ್ರಾಣ ವನ್ನು ತೆಗೆಯುವ ಹಾಗೆ ನಾನು ಅವನಿಗೆ ಮಾಡಿದ ಪಾಪವೇನು ಅಂದನು.
1
David fled from Naioth in Ramah, and came and said before Jonathan, "What have I done? What is my iniquity?" and "What is my sin before your father, that he seeks my life?"
2
ಅವನು ಇವನಿಗೆ--ಅದು ಆಗಬಾರದು; ನೀನು ಸಾಯುವದಿಲ್ಲ; ಇಗೋ, ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ ದೊಡ್ಡ ಕಾರ್ಯವನ್ನಾದರೂ ಮಾಡುವದಿಲ್ಲ. ಈ ಕಾರ್ಯವನ್ನು ಯಾಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು ಅಂದನು.
2
He said to him, "Far from it; you shall not die: behold, my father does nothing either great or small, but that he discloses it to me; and why should my father hide this thing from me? It is not so."
3
ಆಗ ದಾವೀದನು ಪ್ರಮಾಣಮಾಡಿ--ನಿನ್ನ ಕಣ್ಣು ಮುಂದೆ ನನಗೆ ದಯೆದೊರಕೀತೆಂದು ನಿನ್ನ ತಂದೆಯು ನಿಶ್ಚಯವಾಗಿ ಬಲ್ಲನು; ಆದಕಾರಣ ಯೋನಾತಾನನು ವ್ಯಥೆಪಡದ ಹಾಗೆ--ಅವನು ಇದನ್ನು ತಿಳಿಯಬಾರದು ಎಂದು ಅನ್ನುತ್ತಾನೆ. ನಿಶ್ಚಯವಾಗಿ ಕರ್ತನಾಣೆ, ನಿನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ದೂರ ಮಾತ್ರವದೆ ಅಂದನು.
3
David swore moreover, and said, Your father knows well that I have found favor in your eyes; and he says, Don't let Jonathan know this, lest he be grieved: but truly as Yahweh lives, and as your soul lives, there is but a step between me and death.
4
ಆಗ ಯೋನಾತಾನನು ದಾವೀದನಿಗೆ--ನಿನ್ನ ಪ್ರಾಣವು ಆಶಿಸುವದನ್ನು ನಿನ ಗೋಸ್ಕರ ನಾನು ಮಾಡುವೆನು ಅಂದನು.
4
Then said Jonathan to David, Whatever your soul desires, I will even do it for you.
5
ದಾವೀ ದನು ಯೋನಾತಾನನಿಗೆ--ಇಗೋ, ನಾಳೆ ಅಮಾ ವಾಸ್ಯೆ; ಆದದರಿಂದ ನಾನು ಅರಸನ ಸಂಗಡ ಪಂಕ್ತಿ ಯಲ್ಲಿ ಊಟ ಮಾಡಲೇಬೇಕಾಗಿರುವದು. ನಾನು ಮೂರನೇ ದಿವಸದ ಸಾಯಂಕಾಲದ ವರೆಗೆ ಹೊಲ ದಲ್ಲಿ ಬಚ್ಚಿಟ್ಟುಕೊಂಡಿರಲು ನನ್ನನ್ನು ಹೋಗಗೊಡಿಸು.
5
David said to Jonathan, Behold, tomorrow is the new moon, and I should not fail to sit with the king at meat: but let me go, that I may hide myself in the field to the third day at evening.
6
ನಿನ್ನ ತಂದೆಯು ನಾನು ಅಲ್ಲಿ ಇಲ್ಲದಿರುವದನ್ನು ನೋಡಿ ಶ್ರದ್ಧೆಯಿಂದ ವಿಚಾರಿಸಿ--ಅವನು ಎಲ್ಲಿ ಎಂದು ಕೇಳಿದರೆ--ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಿ ಬರುವದಕ್ಕೆ ನನ್ನನ್ನು ಬಹಳವಾಗಿ ಬೇಡಿಕೊಂಡನು; ತನ್ನ ಎಲ್ಲಾ ಕುಟುಂಬಕ್ಕೋಸ್ಕರ ವರುಷದ ಯಜ್ಞಮಾಡುತ್ತಾರೆ ಎಂದು ಹೇಳು.
6
If your father miss me at all, then say, David earnestly asked leave of me that he might run to Bethlehem his city; for it is the yearly sacrifice there for all the family.
7
ಅದಕ್ಕೆ ಅವನು --ಒಳ್ಳೇದೆಂದು ಹೇಳಿದರೆ ನಿನ್ನ ಸೇವಕನಿಗೆ ಸಮಾಧಾನ ವಾಗಿರುವದು; ಅವನು ಬಹಳ ಕೋಪಮಾಡಿದರೆ ಅವನಿಂದ ಕೇಡು ಸ್ಥಿರಮಾಡಲ್ಪಟ್ಟಿತೆಂದು ತಿಳುಕೋ.
7
If he says, 'It is well;' your servant shall have peace: but if he be angry, then know that evil is determined by him.
8
ಆದದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು; ಯಾಕಂದರೆ ಕರ್ತನ ಒಡಂಬಡಿಕೆ ಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀ ಯಲ್ಲಾ. ಆದಾಗ್ಯೂ ನನ್ನಲ್ಲಿ ಅಕ್ರಮವಿದ್ದರೆ ನೀನೇ ನನ್ನನ್ನು ಕೊಂದುಹಾಕು; ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವದು ಯಾಕೆ ಅಂದನು.
8
Therefore deal kindly with your servant; for you have brought your servant into a covenant of Yahweh with you: but if there be in me iniquity, kill me yourself; for why should you bring me to your father?
9
ಯೋನಾತಾನನು--ಅದು ನಿನಗೆ ದೂರವಾಗಿರಲಿ; ಯಾಕಂದರೆ ಕೇಡು ನಿನ್ನ ಮೇಲೆ ಬರುವಂತೆ ನನ್ನ ತಂದೆಯಿಂದ ನಿಷ್ಕರ್ಷೆ ಮಾಡಲ್ಪಟ್ಟಿತೆಂದು ನಿಜವಾಗಿ ತಿಳಿದಿದ್ದರೆ ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ ಅಂದನು.
9
Jonathan said, Far be it from you; for if I should at all know that evil were determined by my father to come on you, then wouldn't I tell you that?
10
ದಾವೀದನು ಯೋನಾತಾನನಿಗೆ--ನಿನ್ನ ತಂದೆಯು ನಿನಗೆ ಕಠಿಣವಾದ ಪ್ರತ್ಯುತ್ತರ ಹೇಳಿದರೆ ಅದನ್ನು ನನಗೆ ತಿಳಿಸುವವನು ಯಾರು ಅಂದನು.
10
Then said David to Jonathan, Who shall tell me if perchance your father answer you roughly?
11
ಯೋನಾತಾನನು ದಾವೀದನಿಗೆ--ನಾವು ಹೊಲಕ್ಕೆ ಹೋಗೋಣ ಬಾ ಅಂದನು. ಹಾಗೆಯೇ ಅವರಿಬ್ಬರು ಹೊಲಕ್ಕೆ ಹೊರಟುಹೋದರು.
11
Jonathan said to David, Come, and let us go out into the field. They went out both of them into the field.
12
ಯೋನಾತಾನನು ದಾವೀದನಿಗೆ--ಇಸ್ರಾಯೇ ಲ್ಯರ ದೇವರಾದ ಕರ್ತನೇ, ನಾನು ನಾಳೆನಾಡಿದ್ದರೊ ಳಗೆ ನನ್ನ ತಂದೆಯನ್ನು ವಿಚಾರಿಸಲು ಇಗೋ, ದಾವೀದನ ಮೇಲೆ ದಯವಾದರೆ ನಿನಗೆ ತಿಳಿಸುವ ಹಾಗೆ ಹೇಳಿ ಕಳುಹಿಸದೆ ಇದ್ದರೆ ಕರ್ತನು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.
12
Jonathan said to David, Yahweh, the God of Israel, be witness: when I have sounded my father about this time tomorrow, or the third day, behold, if there be good toward David, shall I not then send to you, and disclose it to you?
13
ಆದರೆ ನಿನಗೆ ಕೇಡುಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ ಅದನ್ನು ನಿನಗೆ ತಿಳಿಸಿ ನೀನು ಸಮಾಧಾನ ದಿಂದ ಹೋಗುವ ಹಾಗೆ ನಿನ್ನನ್ನು ಕಳುಹಿಸುವೆನು.
13
Yahweh do so to Jonathan, and more also, should it please my father to do you evil, if I don't disclose it to you, and send you away, that you may go in peace: and Yahweh be with you, as he has been with my father.
14
ಕರ್ತನು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ. ಆದರೆ ನಾನು ಇನ್ನೂ ಬದುಕು ತ್ತಿರುವಾಗ ನಾನು ಸಾಯದ ಹಾಗೆ ನೀನು ಕರ್ತನ ದಯೆಯನ್ನು ನನ್ನ ಮೇಲೆ ತೋರಿಸಬೇಕಾದದ್ದಲ್ಲದೆ
14
You shall not only while yet I live show me the loving kindness of Yahweh, that I not die;
15
ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು.
15
but also you shall not cut off your kindness from my house forever; no, not when Yahweh has cut off the enemies of David everyone from the surface of the earth.
16
ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು.
16
So Jonathan made a covenant with the house of David, saying, Yahweh will require it at the hand of David's enemies.
17
ಯೋನಾತಾನನು ದಾವೀದನನ್ನು ಪ್ರೀತಿ ಮಾಡಿದ್ದರಿಂದ ತಿರಿಗಿ ಅವನಿಂದ ಪ್ರಮಾಣ ತೆಗೆದುಕೊಂಡನು; ಅವನು ತನ್ನ ಪ್ರಾಣವನ್ನು ಪ್ರೀತಿ ಮಾಡಿದ ಹಾಗೆಯೇ ಅವನನ್ನು ಪ್ರೀತಿ ಮಾಡಿದನು.
17
Jonathan caused David to swear again, for the love that he had to him; for he loved him as he loved his own soul.
18
ಯೋನಾತಾನನು ದಾವೀದನಿಗೆ--ನಾಳೆ ಅಮಾ ವಾಸ್ಯೆ; ನೀನು ಅಲ್ಲಿ ಇಲ್ಲದಿರುವದರಿಂದ ನಿನ್ನ ಸ್ಥಳವು ಬರಿದಾಗಿರುವದು.
18
Then Jonathan said to him, Tomorrow is the new moon: and you will be missed, because your seat will be empty.
19
ನೀನು ಮೂರು ದಿವಸ ತಡೆದ ತರುವಾಯ ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರಿಗಿ ಬಂದು ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
19
When you have stayed three days, you shall go down quickly, and come to the place where you did hide yourself when the business was in hand, and shall remain by the stone Ezel.
20
ಆಗ ನಾನು ಗುರಿ ಇಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
20
I will shoot three arrows on the side of it, as though I shot at a mark.
21
ಇಗೋ, ಹುಡುಗ ನನ್ನು ಕಳುಹಿಸಿ--ಆ ಬಾಣಗಳನ್ನು ಹುಡುಕಿಕೊಂಡು ಬಾ ಎಂದು ಹೇಳುವೆನು. ಇಗೋ, ಆ ಬಾಣಗಳು ಈಚೆ ಬಿದ್ದಿರುತ್ತವೆ; ಅವುಗಳನ್ನು ತೆಗೆದುಕೊಂಡು ಬಾ ಎಂದು ನಾನು ಹುಡುಗನಿಗೆ ಹೇಳಿದರೆ ನೀನು ಬರ ಬಹುದು. ಯಾಕಂದರೆ ಕರ್ತನಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವದು.
21
Behold, I will send the boy, saying, Go, find the arrows. If I tell the boy, Behold, the arrows are on this side of you; take them, and come; for there is peace to you and no hurt, as Yahweh lives.
22
ಆದರೆ--ಇಗೋ, ಬಾಣ ಗಳು ಆಚೆ ಬಿದ್ದಿರುತ್ತವೆ ಎಂದು ಹುಡುಗನಿಗೆ ಹೇಳಿದರೆ ಹೊರಟುಹೋಗು; ಯಾಕಂದರೆ ಕರ್ತನು ನಿನ್ನನ್ನು ಕಳುಹಿಸಿದನು.
22
But if I say thus to the boy, Behold, the arrows are beyond you; go your way; for Yahweh has sent you away.
23
ನಾನೂ ನೀನೂ ಮಾತನಾಡಿಕೊಂಡ ಈ ಕಾರ್ಯಕ್ಕೆ ಇಗೋ, ಕರ್ತನು ನನಗೂ ನಿನಗೂ ಮಧ್ಯೆ ಎಂದೆಂದಿಗೂ ಸಾಕ್ಷಿಯಾಗಿ ಇರುವನು ಅಂದನು.
23
As touching the matter which you and I have spoken of, behold, Yahweh is between you and me forever.
24
ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟು ಕೊಂಡಿದ್ದನು. ಅಮಾವಾಸ್ಯೆ ಆದಾಗ ಅರಸನು ಭೋಜನವನ್ನು ಮಾಡಲು ಕುಳಿತನು.
24
So David hid himself in the field: and when the new moon was come, the king sat him down to eat food.
25
ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ ಯೋನಾತಾನನು ಎದ್ದನು; ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು.
25
The king sat on his seat, as at other times, even on the seat by the wall; and Jonathan stood up, and Abner sat by Saul's side: but David's place was empty.
26
ದಾವೀದನು ಇರುವ ಸ್ಥಳವು ಬರಿದಾಗಿತ್ತು. ಆದಾಗ್ಯೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿದ್ದಾನೆ, ನಿಶ್ಚಯವಾಗಿ ಅಶುಚಿಯಾಗಿದ್ದಾನೆ ಎಂದು ಅಂದುಕೊಂಡನು.
26
Nevertheless Saul didn't say anything that day: for he thought, Something has happened to him. He is not clean. Surely he is not clean.
27
ಅಮಾವಾ ಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡ್ರುವ ಸ್ಥಳವು ಹಾಗೆಯೇ ಬರಿದಾಗಿತ್ತು; ಆದದರಿಂದ ಸೌಲನುಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ ಎಂದು ತನ್ನ ಕುಮಾರನಾದ ಯೋನಾ ತಾನನನ್ನು ಕೇಳಿದನು.
27
It happened on the next day after the new moon, which was the second day, that David's place was empty: and Saul said to Jonathan his son, Why doesn't the son of Jesse come to meat, neither yesterday, nor today?
28
ಯೋನಾತಾನನು ಸೌಲನಿಗೆ ಪ್ರತ್ಯುತ್ತರವಾಗಿ--ಬೇತ್ಲೆಹೇಮಿನ ವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿ ಕೊಂಡನು.
28
Jonathan answered Saul, David earnestly asked leave of me to go to Bethlehem:
29
ನನಗೆ ಅವನು--ದಯಮಾಡಿ ನನಗೆ ಅಪ್ಪಣೆಕೊಡು; ಯಾಕಂದರೆ ಊರೊಳಗೆ ನಮ್ಮ ಕುಟುಂಬದವರು ಯಜ್ಞ ಮಾಡುತ್ತಾರೆ; ನನ್ನ ಸಹೋ ದರನು ನನ್ನನ್ನು ಬರಲು ಹೇಳಿ ಕಳುಹಿಸಿದನು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ನನ್ನ ಸಹೋದರರನ್ನು ನೋಡುವದಕ್ಕೆ ಹೋಗುತ್ತೇನೆ ಅಂದನು. ಆದದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ ಅಂದನು.
29
and he said, Please let me go, for our family has a sacrifice in the city; and my brother, he has commanded me to be there: and now, if I have found favor in your eyes, let me get away, I pray you, and see my brothers. Therefore he is not come to the king's table.
30
ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ--ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ ನಿನ್ನ ತಾಯಿಯ ಬೆತ್ತಲೆತನಕ್ಕೆ ನಾಚಿಕೆ ಯಾಗುವ ಹಾಗೆಯೂ ಇಷಯನ ಮಗನನ್ನು ನೀನು ಆದುಕೊಂಡಿದ್ದೀ ಎಂದು ನಾನರಿಯೆನೋ?
30
Then Saul's anger was kindled against Jonathan, and he said to him, You son of a perverse rebellious woman, don't I know that you have chosen the son of Jesse to your own shame, and to the shame of your mother's nakedness?
31
ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
31
For as long as the son of Jesse lives on the earth, you shall not be established, nor your kingdom. Therefore now send and bring him to me, for he shall surely die.
32
ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು.
32
Jonathan answered Saul his father, and said to him, "Why should he be put to death? What has he done?"
33
ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದದರಿಂದ ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದ್ದಾನೆಂದು ಯೋನಾತಾ ನನು ತಿಳುಕೊಂಡನು.
33
Saul cast his spear at him to strike him. By this Jonathan knew that his father was determined to put David to death.
34
ಕೋಪದ ಉರಿಯಿಂದ ಆಗ ಯೋನಾತಾನನು ಮೇಜಿನಿಂದ ಎದ್ದುಹೋಗಿ ತಿಂಗಳಿನ ಎರಡನೇ ದಿವಸದಲ್ಲಿ ಊಟಮಾಡಲಿಲ್ಲ. ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದ ರಿಂದ ಅವನಿಗೋಸ್ಕರ ವ್ಯಥೆಪಟ್ಟನು.
34
So Jonathan arose from the table in fierce anger, and ate no food the second day of the month; for he was grieved for David, because his father had done him shame.
35
ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗ ನನ್ನು ಕರಕೊಂಡು ಹೊಲಕ್ಕೆ ಹೋಗಿ
35
It happened in the morning, that Jonathan went out into the field at the time appointed with David, and a little boy with him.
36
ಹುಡುಗನಿಗೆ--ನೀನು ಓಡಿಹೋಗಿ ನಾನು ಹಾಕುವ ಬಾಣ ಗಳನ್ನು ಹುಡುಕಿಕೊಂಡು ಬಾ ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ ಆಚೆ ಹೋಗುವ ಹಾಗೆ ಬಾಣವನ್ನು ಎಸೆದನು.
36
He said to his boy, Run, find now the arrows which I shoot. As the boy ran, he shot an arrow beyond him.
37
ಯೋನಾತಾನನು ಹಾಕಿದ ಬಾಣಬಿದ್ದ ಸ್ಥಳದ ವರೆಗೆ ಹುಡುಗನು ಹೋದಾಗ--ಬಾಣವು ನಿನಗೆ ಆಚೆ ಇಲ್ಲವೋ ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
37
When the boy was come to the place of the arrow which Jonathan had shot, Jonathan cried after the boy, and said, Isn't the arrow beyond you?
38
ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು.
38
Jonathan cried after the boy, Go fast! Hurry! Don't delay! Jonathan's boy gathered up the arrows, and came to his master.
39
ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ ದಾವೀದನೂ ಮಾತ್ರ ಆ ಸಂಗತಿ ಯನ್ನು ತಿಳುಕೊಂಡಿದ್ದರು.
39
But the boy didn't know anything: only Jonathan and David knew the matter.
40
ಆಗ ಯೋನಾತಾನನು ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ--ಅವುಗಳನ್ನು ಪಟ್ಟಣ ದೊಳಕ್ಕೆ ತೆಗೆದುಕೊಂಡು ಹೋಗು ಅಂದನು.
40
Jonathan gave his weapons to his boy, and said to him, Go, carry them to the city.
41
ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
41
As soon as the boy was gone, David arose out of a place toward the South, and fell on his face to the ground, and bowed himself three times: and they kissed one another, and wept one with another, until David exceeded.
42
ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
42
Jonathan said to David, Go in peace, because we have sworn both of us in the name of Yahweh, saying, Yahweh shall be between me and you, and between my seed and your seed, forever. He arose and departed: and Jonathan went into the city.
Choose Theme