ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು.
Cross references
ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.
ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
ಕರ್ತನನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಕರ್ತನನ್ನು ಸ್ತುತಿಸು.
ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
ಆಗ ಯೆರೆವಿಾಯನು ಹೇಳಿದ್ದೇನೆಂದರೆ--ಕರ್ತನ ವಾಕ್ಯವು ನನಗೆ ಬಂತು, ಹೇಗಂದರೆ--
ನಾವು ಕರ್ತನನ್ನು ತಿಳಿದುಕೊಳ್ಳಲು ಆತನನ್ನು ಹಿಂಬಾ ಲಿಸಿದರೆ ನಾವು ತಿಳಿದುಕೊಳ್ಳುವೆವು; ಅರುಣೋದ ಯದ ಹಾಗೆ ಆತನ ಹೊರಡೋಣವು ಸಿದ್ಧವಾಗಿದೆ; ಆತನು ಮಳೆಯಂತೆಯೂ ಮುಂಗಾರಿನಂತೆಯೂ ಭೂಮಿಗೆ ತಂಪುಮಾಡುವ ಹಿಂಗಾರಿನಂತೆಯೂ ನಮ್ಮ ಬಳಿಗೆ ಬರುವನು.
ಯಾವಾಗಂದರೆ, ಕರ್ತನ ಮುಖದ ಮುಂದೆ ಬೇಡಿ ಕೊಳ್ಳುವದಕ್ಕೂ
ಅವನು ಹೇಳಿದ್ದನ್ನು ಕೇಳಿ ಆ ಇಬ್ಬರು ಶಿಷ್ಯರು ಯೇಸುವಿನ ಹಿಂದೆ ಹೋದರು.