ವಿಧವೆಗೂ ದಿಕ್ಕಿಲ್ಲದವನಿಗೂ ಅನ್ಯ ನಿಗೂ ಬಡವನಿಗೂ ಬಲಾತ್ಕಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ ಎಂಬದು.
Cross references
ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.
ಪರದೇಶಸ್ಥನನ್ನು ಉಪದ್ರವ ಪಡಿಸಬೇಡ; ಪರ ದೇಶಸ್ಥನ ಹೃದಯವನ್ನು ನೀವು ತಿಳಿದಿರುವಿರಿ. ನೀವೂ ಐಗುಪ್ತದೇಶದಲ್ಲಿ ಪರದೇಶಿಗಳಾಗಿದ್ದೀರಷ್ಟೆ.
ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು.
ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ನ್ಯಾಯ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.
ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ.
ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ.
ದುಷ್ಟ ಭಾವನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ಓಡಾಡುವದರಲ್ಲಿ ತ್ವರೆಪಡುವ ಕಾಲುಗಳು,
ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ.
ಪೂರ್ವಕಾ ಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲ ಗಳಲ್ಲಿ ಪ್ರವೇಶಿಸದಿರು;