Cross references
ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು.
ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು.
ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು.
ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
ಓ ಯೆರೂಸ ಲೇಮೇ, ಧೂಳನ್ನು ಝಾಡಿಸಿಕೋ; ಎದ್ದು ಕೂತು ಕೋ, ಓ ಸೆರೆಯಾದ ಚೀಯೋನ್ ಕುಮಾರಿಯೇ, ನಿನ್ನ ಕುತ್ತಿಗೆಯ ಪಾಶಗಳನ್ನು ಬಿಚ್ಚಿಕೋ.
ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ.
ಇದ್ದಕ್ಕಿದ್ದ ಹಾಗೆ ಬಾಬೆಲ್ ಬಿದ್ದು ಮುರಿಯಲ್ಪಟ್ಟಿದೆ; ಅದರ ವಿಷಯ ಗೋಳಾ ಡಿರಿ; ಅದರ ನೋವಿಗೆ ತೈಲ ತಕ್ಕೊಳ್ಳಿರಿ; ಒಂದು ವೇಳೆ ವಾಸಿಯಾದೀತು.
ನಾಲ್ಕನೇ ತಿಂಗಳಲ್ಲಿ, ತಿಂಗಳಿನ ಒಂಭತ್ತನೇ ದಿವಸದಲ್ಲಿ ದೇಶಸ್ಥರಿ ಗೋಸ್ಕರ ರೊಟ್ಟಿ ಇಲ್ಲದೆ ಪಟ್ಟಣದಲ್ಲಿ ಕ್ಷಾಮವು ಕಠಿಣವಾಗಿತ್ತು.
ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು.
ಅವನು ಇನ್ನೂ ಬೇರೆ ಅನೇಕ ಮಾತುಗಳಿಂದ ಸಾಕ್ಷಿಕೊಟ್ಟು--ಈ ಮೂರ್ಖ ಸಂತತಿಯವರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿರಿ ಎಂದು ಎಚ್ಚರಿಸಿ ಹೇಳಿದನು.
ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.