ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು.
Cross references
ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾದದ್ದನ್ನು ನೋಡಿ ಪಶ್ಚಾ ತ್ತಾಪಪಟ್ಟು ಆ ಮೂವತ್ತು ಬೆಳ್ಳಿಯ ನಾಣ್ಯಗಳನು ತಿರಿಗಿ ಪ್ರಧಾನ ಯಾಜಕರ ಮತ್ತು ಹಿರಿಯರ ಬಳಿಗೆ ತಂದು
ಕರ್ತನು ನನಗಾಗಿ ನೇಮಿಸಿದ ಹಾಗೆ ಅವುಗಳನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು ಎಂಬದು.
ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ.
ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು.
ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು.