Home Bibles ☰ Books ಜೆಕರ್ಯ 1:3 · ಕನ್ನಡ ಬೈಬಲ್
ಜೆಕರ್ಯ 1:3 · ಕನ್ನಡ ಬೈಬಲ್

ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

Cross references

ದ್ವಿತೀಯೋಪದೇಶಕಾಂಡ 4:30

ನೀನು ಇಕ್ಕಟ್ಟಿಗೆ ಗುರಿಯಾಗಿ ಇವೆಲ್ಲವುಗಳು ನಿನಗೆ ಸಂಭವಿಸಿದಾಗ ಕಡೇ ದಿವಸ ಗಳಲ್ಲಿ ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊಂಡು

ದ್ವಿತೀಯೋಪದೇಶಕಾಂಡ 30:2

ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊಂಡು ನೀನೂ ನಿನ್ನ ಮಕ್ಕಳೂ-- ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ಆತನ ಮಾತಿಗೆ ವಿಧೇಯರಾದರೆ

1 ಅರಸುಗಳು 8:47

ಅವರು ಸೆರೆ ಒಯ್ಯಲ್ಪಟ್ಟ ದೇಶದಲ್ಲಿ ಪಶ್ಚಾತ್ತಾಪಪಟ್ಟು ತಿರುಗಿ ಕೊಂಡು ತಾವು ಪಾಪಮಾಡಿ ವಕ್ರಬುದ್ಧಿಯಿಂದ ನಡೆದು ದ್ರೋಹಮಾಡಿದೆವೆಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ವಿಜ್ಞಾಪನೆಮಾಡಿ ಅವರನ್ನು ಸೆರೆಯಾಗಿ ಒಯ್ದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ

2 ದಿನವೃತ್ತಾಂತ 15:2

ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;

2 ದಿನವೃತ್ತಾಂತ 15:4

ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.

2 ದಿನವೃತ್ತಾಂತ 30:6

ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್‌ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್‌ ಮಕ್ಕಳೇ, ಅಬ್ರಹಾಮ್‌ ಇಸಾಕ್‌ ಇಸ್ರಾಯೇಲ್‌ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು.

ನೆಹೆಮ್ಯ 9:28

ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿನ್ನ ಮುಂದೆ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದ ಕಾರಣ ಅವರ ಶತ್ರುಗಳು ಅವರನ್ನು ಆಳುವ ಹಾಗೆ ಅವರ ಕೈಯಲ್ಲಿ ಅವರನ್ನು ಒಪ್ಪಿಸಿದಿ; ಆದರೆ ಅವರು ತಿರಿಗಿ ನಿನ್ನನ್ನು ಕೂಗಿದಾಗ ನೀನು ಆಕಾಶದಿಂದ ಕೇಳಿ ಅವರನ್ನು ನಿನ್ನ ಕರುಣೆಯ ಪ್ರಕಾರ ಅನೇಕ ಸಾರಿ ವಿಮೋಚನೆ ಮಾಡಿದಿ.

ಯೆಶಾಯ 31:6

ಇಸ್ರಾಯೇಲ್ಯರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದ್ದೀರೋ ಆತನ ಕಡೆಗೆ ತಿರುಗಿ ಕೊಳ್ಳಿರಿ.

ಯೆಶಾಯ 55:6

ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.

ಯೆರೆಮಿಯ 3:12

ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು; ಯಾವವಂದರೆ--ಹಿಂದಿ ರುಗಿದ ಇಸ್ರಾಯೇಲೇ, ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಾನು ನನ್ನ ಕೋಪವನ್ನು ನಿನ್ನ ಮೇಲೆ ಬೀಳ ಮಾಡುವದಿಲ್ಲ; ನಾನು ದಯಾಪರನು ಎಂದು ಕರ್ತನು ಅನ್ನುತ್ತಾನೆ, ಎಂದೆಂದಿಗೂ ಕೋಪವಿಟ್ಟು ಕೊಳ್ಳುವದಿಲ್ಲ.

ಯೆರೆಮಿಯ 3:22

ಹಿಂಜರಿದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಹಿಂಜರಿಯುವಿಕೆಯನ್ನು ನಾನು ಸ್ವಸ್ಥಮಾಡುವೆನು ಎಂದು ಕರ್ತನು ಅನ್ನುತ್ತಾನೆ. ಇಗೋ, ನಿನ್ನ ಬಳಿಗೆ ಬರುತ್ತೇವೆ; ನೀನು ದೇವರಾದ ನಮ್ಮ ಕರ್ತನಾಗಿದ್ದೀ.

ಯೆರೆಮಿಯ 4:1

ಓ ಇಸ್ರಾಯೇಲೇ, ನೀನು ತಿರುಗಿಕೊಂಡರೆ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ; ನೀನು ನಿನ್ನ ಅಸಹ್ಯಗಳನ್ನು ನನ್ನ ಎದುರಿನಿಂದ ತೊಲಗಿಸಿದರೆ ಕದಲದೆ ಇರುವಿ.

ಯೆರೆಮಿಯ 12:15

ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ.

ಯೆರೆಮಿಯ 25:5

ನಾನು ಬೆಳಿಗ್ಗೆ ನಿಮ್ಮ ಬಳಿಗೆ ಕಳುಹಿಸಿದಂಥ ನೀವು ಕೇಳದಂಥ ನನ್ನ ಸೇವಕರಾದ ಪ್ರವಾದಿಗಳ ವಾಕ್ಯಗಳನ್ನು ಕೇಳದೆಹೋದರೆ

Interlinear

Choose Theme