Cross references
ಏಹೂದನು ಇಬ್ಬಾಯಿಯ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿ ಕೊಂಡು ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು
ಅಂದಿನಿಂದ ಏನಾಯಿತಂದರೆ ನನ್ನ ಸೇವಕರಲ್ಲಿ ಅರ್ಧಜನರು ಕೆಲಸವನ್ನು ನಡಿಸಿದರು; ಮಿಕ್ಕಾದ ಅರ್ಧ ಜನರು ಈಟಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಕವಚಗಳನ್ನೂ ಧರಿಸಿದರು. ಪ್ರಧಾನರು ಯೆಹೂದ ಮನೆಯವರ ಹಿಂದೆ ನಿಂತರು.
ಗೋಡೆಯ ಮೇಲೆ ಕಟ್ಟುವವರೂ ಹೊರೆಗಾರರೂ ಹೊರಿಸುವವರೂ ಒಂದು ಕೈಯಲ್ಲಿ ಕೆಲಸವನ್ನು ನಡಿಸಿ ಮತ್ತೊಂದು ಕೈಯಲ್ಲಿ ಆಯುಧವನ್ನು ಹಿಡುಕೊಂಡಿದ್ದರು.
ಹೀಗೆಯೇ ಅರ್ಧ ಜನರು ಈಟಿಗಳನ್ನು ಹಿಡುಕೊಂಡು ಉದಯ ಮೊದಲುಗೊಂಡು ನಕ್ಷತ್ರ ಗಳನ್ನು ಕಾಣುವ ಮಟ್ಟಿಗೂ ನಾವು ಕೆಲಸದಲ್ಲಿ ಕಷ್ಟ ಪಟ್ಟೆವು.
ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ.
ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ.
ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆ ಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ. ಆದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.
ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.