Home Bibles ಪರಮಗೀತ 1:17 · ಕನ್ನಡ ಬೈಬಲ್
ಪರಮಗೀತ 1:17 · ಕನ್ನಡ ಬೈಬಲ್

ನಮ್ಮ ಮನೆಯ ತೊಲೆಗಳು ದೇವದಾರು ಮರಗಳು, ನಮ್ಮ ಜಂತೆಗಳು ತುರಾಯಿ ಗಿಡಗಳು.

Cross references

1 ಅರಸುಗಳು 6:9

ಹೀಗೆಯೇ ಅವನು ಮನೆಯನ್ನು ಕಟ್ಟಿ ತೀರಿಸಿದ ತರುವಾಯ ಮನೆಯನ್ನು ದೇವದಾರುಗಳ ತೊಲೆಗಳಿಂದಲೂ ಹಲಿ ಗೆಗಳಿಂದಲೂ ಮುಚ್ಚಿಸಿದನು.

2 ದಿನವೃತ್ತಾಂತ 2:8

ಇದಲ್ಲದೆ ನೀನು ಇಲ್ಲಿಗೆ ದೇವದಾರು ಮರಗಳನ್ನೂ ತುರಾಯಿಮರಗಳನ್ನೂ ಸುಗಂಧದ ಮರಗಳನ್ನೂ ಲೆಬನೋನಿನಿಂದ ನನಗೆ ಕಳುಹಿಸು. ಲೆಬನೋನಿನಲ್ಲಿ ಮರಗಳನ್ನು ಕಡಿಯಲು ನಿನ್ನ ಸೇವ ಕರು ಜಾಣರಾಗಿದ್ದಾರೆ.

ಕೀರ್ತನೆಗಳು 92:12

ನೀತಿವಂತನು ಖರ್ಜೂರ ಮರದ ಹಾಗೆ ಚಿಗುರುವನು; ಲೆಬನೋನಿ ನಲ್ಲಿರುವ ದೇವದಾರಿನ ಹಾಗೆ ಬೆಳೆಯುವನು.

ಪರಮಗೀತ 7:5

ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ.

ಪರಮಗೀತ 8:9

ಅವಳು ಗೋಡೆಯಾಗಿದ್ದರೆ ನಾವು ಅವಳ ಮೇಲೆ ಬೆಳ್ಳಿಯ ಅರಮನೆಯನ್ನು ಕಟ್ಟುವೆವು. ಅವಳು ಬಾಗಲಾಗಿದ್ದರೆ ದೇವದಾರು ಹಲಿಗೆಗಳಿಂದ ಅವಳನ್ನು ಮುಚ್ಚುವೆವು.

ಯೆಹೆಜ್ಕೇಲ 41:16

ಬಾಗಲುಗಳ ಕಂಬಗಳನ್ನೂ ಇಕ್ಕಟ್ಟಾದ ಕಿಟಕಿ ಗಳನ್ನೂ ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತು ಗಳಲ್ಲಿ ಬಾಗಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಸಲ್ಪಟ್ಟಿದ್ದವು. ಪಡಸಾಲೆಗಳನ್ನೂ ನೆಲವು ಮೊದಲ್ಗೊಂಡು ಮುಚ್ಚಲ್ಪಟ್ಟಂತ ಕಿಟಕಿಗಳ ವರೆಗೂ;

ಯೆಹೆಜ್ಕೇಲ 42:3

ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡ ಸಾಲೆಗಳ ಮೇಲೆ ಪಡಸಾಲೆಗಳಿದ್ದವು.

1 ತಿಮೋಥೆಯ 3:15

ಆದರೆ ಒಂದು ವೇಳೆ ನಾನು ತಡಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಬೇಕು.ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ

ಹೆಬ್ರಿಯರಿಗೆ 11:10

ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು.

1 ಪೇತ್ರ 2:4

ನೀವು ಜೀವವುಳ್ಳ ಕಲ್ಲಾಗಿರು ವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿಜವಾಗಿಯೂ ನಿರಾಕರಿಸಲ್ಪಟ್ಟಿದ್ದರೂ ಅದು ದೇವ ರಿಂದ ಆಯಲ್ಪಟ್ಟದ್ದೂ ಅಮೂಲ್ಯವಾದದ್ದೂ ಆಯಿತು.

Interlinear

Choose Theme