Home Bibles ಪರಮಗೀತ 1:15 · ಕನ್ನಡ ಬೈಬಲ್
ಪರಮಗೀತ 1:15 · ಕನ್ನಡ ಬೈಬಲ್

ಇಗೋ, ನನ್ನ ಪ್ರಿಯಳೇ, ನೀನು ಸೌಂದರ್ಯ ವಂತೆಯು, ಇಗೋ, ನೀನು ಸೌಂದರ್ಯವಂತೆಯು ನಿನಗೆ ಪಾರಿವಾಳದ ಕಣ್ಣುಗಳಿವೆ.

Cross references

ಪರಮಗೀತ 1:8

ಓ ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನೀನು ತಿಳಿಯದೆ ಇದ್ದರೆ ನೀನು ಮಂದೆಯ ಜಾಡೆಯನ್ನು ಹಿಡಿದು ಹೊರಟುಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.

ಪರಮಗೀತ 2:10

ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ.

ಪರಮಗೀತ 2:13

ಅಂಜೂರದ ಗಿಡವು ಅದರ ಹೀಚುಗಳನ್ನು ಬಿಡುತ್ತದೆ. ದ್ರಾಕ್ಷೇ ಬಳ್ಳಿಗಳ ಹೂವು ಅದರ ಸುವಾಸನೆಯನ್ನು ಕೊಡು ತ್ತದೆ. ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ ಎಂಬದು.

ಪರಮಗೀತ 4:1

ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ.

ಪರಮಗೀತ 4:7

ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ.

ಪರಮಗೀತ 4:10

ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ!

ಪರಮಗೀತ 5:2

ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.

ಪರಮಗೀತ 5:12

ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ.

ಪರಮಗೀತ 6:4

ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ.

ಪರಮಗೀತ 7:6

ಓ ಪ್ರಿಯಳೇ, ನೀನು ಆನಂದಗಳಿಗಾಗಿ ಎಷ್ಟೋ ಸುಂದರಿಯು, ಎಷ್ಟೋ ಮನೋಹರಳು ಆಗಿದ್ದೀ.

ಪರಮಗೀತ 7:7

ನಿನ್ನ ನೀಳವು ಖರ್ಜೂರ ಮರದ ಹಾಗೆ ಇದೆ; ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲುಗಳ ಹಾಗೆ ಇವೆ.

ಮಲಾಕಿ 2:14

ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ.

2 ಕೊರಿಂಥದವರಿಗೆ 11:2

ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.

ಎಫೆಸದವರಿಗೆ 1:17

ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಪೂರ್ಣನಾದ ತಂದೆಯೂ ಆಗಿರುವಾತನು ತನ್ನ ವಿಷಯವಾದ ತಿಳುವಳಿಕೆಗನುಸಾರವಾಗಿ ಜ್ಞಾನ ಪ್ರಕಟನೆಗಳ ಆತ್ಮ ವನ್ನು ನಿಮಗೆ ಅನುಗ್ರಹಿಸುವಂತೆಯೂ

Interlinear

Choose Theme