Home Bibles ರೂತ 2:6 · ಕನ್ನಡ ಬೈಬಲ್
ರೂತ 2:6 · ಕನ್ನಡ ಬೈಬಲ್

ಅದಕ್ಕೆ ಕೊಯ್ಯು ವವರ ಮೇಲೆ ಮೇಲ್ಗಾವಲಿಯಾಗಿ ಇಡಲ್ಪಟ್ಟ ಆ ಸೇವಕನು ಪ್ರತ್ಯುತ್ತರವಾಗಿ ಇವಳು ಮೋವಾಬ್‌ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಹುಡುಗಿ.

Cross references

ಆದಿಕಾಂಡ 15:2

ಅದಕ್ಕೆ ಅಬ್ರಾಮನು--ಕರ್ತನಾದ ದೇವರೇ, ನನಗೆ ಏನು ಕೊಟ್ಟರೇನು? ನಾನು ಮಕ್ಕಳಿಲ್ಲದವನಾಗಿದ್ದೇನೆ. ಈ ದಮಸ್ಕದವನಾದ ಎಲೀಯೆಜರನು ನನ್ನ ಮನೆಯ ಮನೆವಾರ್ತೆಯವನಾ ಗಿದ್ದಾನಲ್ಲಾ ಅಂದನು.

ಆದಿಕಾಂಡ 24:2

ಆಗ ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರೀ ಸೇವಕನಿಗೆ ಹೇಳಿದ್ದೇ ನಂದರೆ--ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು;

ಆದಿಕಾಂಡ 39:4

ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.

ರೂತ 1:16

ಅದಕ್ಕೆ ರೂತಳು ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ನೀನು ಎಲ್ಲಿ ಹೋಗುವಿಯೋ ನಾನು ಅಲ್ಲಿಗೆ ಬರುವೆನು; ನೀನು ಎಲ್ಲಿ ಇಳುಕೊಳ್ಳುವಿಯೋ ನಾನು ಅಲ್ಲಿ ಇಳು ಕೊಳ್ಳುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.

ರೂತ 1:19

ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣವೆಲ್ಲಾ ಇವರಿಗೋಸ್ಕರ ಗದ್ದಲವಾಗಿ ಅವರು ಇವಳು ನೊವೊ ಮಿಯೋ? ಅಂದರು.

ರೂತ 1:22

ಹೀಗೆ ನೊವೊಮಿ ಮೋವಾಬ್‌ ದೇಶಸ್ಥಳಾದ ರೂತೆಂಬ ತನ್ನ ಸೊಸೆಯ ಸಂಗಡ ಮೋವಾಬ್‌ ದೇಶ ದಿಂದ ತಿರಿಗಿ ಬಂದಳು. ಇದಲ್ಲದೆ ಅವರು ಜವೆ ಗೋಧಿಯ ಸುಗ್ಗಿಯ ಕಾಲ ಪ್ರಾರಂಭಿಸಿದಾಗ ಬೇತ್ಲೆಹೇಮಿಗೆ ಬಂದರು.

ಮತ್ತಾಯ 20:8

ಹೀಗೆ ಸಾಯಂಕಾಲವಾದಾಗ ದ್ರಾಕ್ಷೇತೋಟ ದ ಯಜಮಾನನು ತನ್ನ ಮನೇವಾರ್ತೆಯವನಿಗೆ-- ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನ ವರೆಗೆ ಕೂಲಿಯನ್ನು ಕೊಡು ಎಂದು ಹೇಳಿದನು.

ಮತ್ತಾಯ 24:45

ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?

Interlinear

Choose Theme