ಆಗ ಅವಳ ಅತ್ತೆಯು ಆಕೆಗೆ ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡಿ? ಎಲ್ಲಿ ಕೆಲಸ ಮಾಡಿದಿ? ನಿನ್ನನ್ನು ಪರಾಮರಿಸಿದವನು ಆಶೀರ್ವದಿಸಲ್ಪಡಲಿ ಅಂದಳು. ಅದಕ್ಕವಳು ತಾನು ಯಾವನ ಹತ್ತಿರ ಕೆಲಸ ಮಾಡಿ ದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ ನಾನು ಈ ಹೊತ್ತು ಕೆಲಸಮಾಡಿದವನ ಹೆಸರು ಬೋವಜ ಎಂದು ಹೇಳಿದಳು.
Cross references
ಆಗ ಅವಳು ಸಾಷ್ಟಾಂಗ ಬಿದ್ದು ವಂದಿಸಿ ಅವನಿಗೆ ನಾನು ಅನ್ಯಳಾಗಿರುವಾಗ ನೀನು ನನ್ನನ್ನು ತಿಳುಕೊಂಡು ನನ್ನ ಮೇಲೆ ನಿನ್ನ ಕೃಪೆ ಯನ್ನು ತೋರಿಸಿದ್ದು ಹೇಗೆ ಅಂದಳು.
ಆ ಸ್ತಂಭಗಳನ್ನು ಮಂದಿರದ ದ್ವಾರಾಂಗಳದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ ಎಡಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು.
ಬಡವನನ್ನು ಪರಾಂಬರಿಸುವವನು ಧನ್ಯನು; ಕೇಡಿನ ಸಮಯದಲ್ಲಿ ಕರ್ತನು ಅವನನ್ನು ತಪ್ಪಿಸುವನು.
ಕರ್ತನು ಅವನನ್ನು ಕಾಪಾಡಿ ಜೀವದಲ್ಲಿಡುವನು; ಅವನು ಭೂಮಿಯಲ್ಲಿ ಧನ್ಯನಾಗಿ ರುವನು; ನೀನು ಅವನ ಶತ್ರುಗಳ ಇಷ್ಟಕ್ಕೆ ಅವನನ್ನು ಒಪ್ಪಿಸದೆ ಇರುವಿ.
ಈ ಸಹಾಯ ದಿಂದ ತೋರಿಬಂದ ನಿಮ್ಮ ಯೋಗ್ಯ ಭಾವವನ್ನು ಅವರು ನೋಡುವಾಗ ನೀವು ಕ್ರಿಸ್ತನ ಸುವಾರ್ತೆಗೆ ವಿಧೇಯರಾದದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು.