ರೂತ 1:4 · ಕನ್ನಡ ಬೈಬಲ್
ಇವರು ಒರ್ಫಾ ರೂತ್ ಎಂಬ ಹೆಸರುಗಳುಳ್ಳ ಮೋವಾಬ್ ದೇಶದ ಸ್ತ್ರೀಯರನ್ನು ತಮಗೆ ಹೆಂಡತಿ ಯರನ್ನಾಗಿ ತಕ್ಕೊಂಡು ಸುಮಾರು ಹತ್ತು ವರುಷ ಅಲ್ಲಿ ವಾಸವಾಗಿದ್ದರು.
Cross references
ದ್ವಿತೀಯೋಪದೇಶಕಾಂಡ 7:3
ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು.
ದ್ವಿತೀಯೋಪದೇಶಕಾಂಡ 23:3
ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು.
1 ಅರಸುಗಳು 11:1
ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಅನ್ಯ ಜನಾಂಗಗಳ ಸ್ತ್ರೀಯರಾದ--ಮೋವಾಬ್ಯರು ಅಮ್ಮೋನ್ಯರು ಎದೋ ಮ್ಯರು ಚೀದೋನ್ಯರು ಹಿತ್ತಿಯರನ್ನೂ ಮೋಹಿಸಿದನು.
ನೆಹೆಮ್ಯ 13:23
ಆ ದಿವಸಗಳಲ್ಲಿ ಅಮ್ಮೋನು ಮೋವಾಬು ಅಷ್ಡೋದು ಎಂಬ ದೇಶಗಳ ಸ್ತ್ರೀಯರನ್ನು ಮದುವೆ ಮಾಡಿಕೊಂಡ ಯೆಹೂದ್ಯರನ್ನು ಕಂಡೆನು.
ಮತ್ತಾಯ 1:5
ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು; ಓಬೇದನಿಂದ ಇಷಯನು ಹುಟ್ಟಿದನು;