ಗಂಡನಿರುವ ಸ್ತ್ರೀಯು ಅವನು ಬದುಕಿರುವ ತನಕ ನ್ಯಾಯಪ್ರಮಾಣದಿಂದ ಅವನಿಗೆ ಕಟ್ಟಲ್ಪಟ್ಟಿದ್ದಾಳೆ; ಗಂಡನು ಸತ್ತರೆ ಆಕೆಯು ಅವನ ನ್ಯಾಯಪ್ರಮಾಣದಿಂದ ಬಿಡುಗಡೆಯಾಗಿ ದ್ದಾಳೆ.
Cross references
ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು.
ಅವಳ ಗಂಡನು ಅದನ್ನು ಕೇಳಿ, ಕೇಳಿದ ದಿವಸದಲ್ಲಿ ಅವಳಿಗೆ ಸುಮ್ಮನಿದ್ದ ಪಕ್ಷದಲ್ಲಿ ಅವಳ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದೂ ನಿಲ್ಲುವವು.
ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರ ವಿಲ್ಲ; ಆದರೆ ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಆದರೆ ಹೆಂಡತಿಗುಂಟು.
ಮದುವೆಯಾದವಳು ತನ್ನ ಗಂಡನು ಜೀವದಿಂದಿ ರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳು ವದಕ್ಕೆ ಸ್ವತಂತ್ರಳಾಗಿದ್ದಾಳೆ; ಆದರೆ ಇದು ಕರ್ತನಲ್ಲಿ ಆಗತಕ್ಕದ್ದು.ಆದರೂ ನನ್ನ ನಿರ್ಣಯಕ್ಕನುಸಾರ ಆಕೆಯು ಇದ್ದ ಹಾಗೆಯೇ ಇರುವದಾದರೆ ಆಕೆಯು ಭಾಗ್ಯವಂತಳು; ನನ್ನಲ್ಲಿ ದೇವರಾತ್ಮನು ಇದ್ದಾನೆಂದು ನಾನು ನೆನಸುತ್ತೇನೆ.