ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ.
Cross references
ಹೀಗಿರುವದರಿಂದ ಐಗುಪ್ತ್ಯರು ನಿನ್ನನ್ನು ನೋಡಿ--ಈಕೆಯು ಅವನ ಹೆಂಡತಿ ಎಂದು ಹೇಳುವರು. ನನ್ನನ್ನು ಕೊಂದುಹಾಕಿ ನಿನ್ನನ್ನು ಜೀವದಲ್ಲಿ ಉಳಿಸುವರು.
ಆಗ ಫರೋ ಹನು ಅಬ್ರಾಮನನ್ನು ಕರೆಯಿಸಿ--ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿಯೆಂದು ಯಾಕೆ ತಿಳಿಸಲಿಲ್ಲ?
ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಅಪ್ಪಣೆಕೊಟ್ಟು ಅವರು ಅವನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಕಳುಹಿಸಿಬಿಟ್ಟರು.
ಅಬೀಮೆಲೆಕನು ಅಬ್ರಹಾ ಮನನ್ನು ಕರೆದು ಅವನಿಗೆ--ನೀನು ನಮಗೆ ಮಾಡಿ ದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಾನು ನಿನಗೆ ಏನು ಅಪರಾಧ ಮಾಡಿದ್ದೇನೆ? ನನಗೆ ನೀನು ಮಾಡಬಾರದ ಕಾರ್ಯಗಳನ್ನು ಮಾಡಿದ್ದೀ ಅಂದನು.
ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.
ಆಗ ಆತನು ನನಗೆ--ಒಳಗೆ ಹೋಗು; ಅವರು ಮಾಡುವ ಕೆಟ್ಟ ಅಸಹ್ಯಗಳನ್ನು ನೋಡು ಅಂದನು.
ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
ಆದದರಿಂದ ದೇವರಿಗೆ ಸಂಬಂಧಪಟ್ಟವುಗಳಲ್ಲಿ ಯೇಸು ಕ್ರಿಸ್ತನ ಮೂಲಕ ನಾನು ಹೆಚ್ಚಳಪಡುತ್ತೇನೆ.
ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
ನಿನಗೂ ಇತರರಿಗೂ ತಾರತಮ್ಯ ಮಾಡಿ ದವರು ಯಾರು? ನೀನು ಹೊಂದದೆ ಇರುವಂಥದ್ದು ನಿನ್ನಲ್ಲಿ ಯಾವದು ಇದೆ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?
ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ!
ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿ ಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹೊಗಳಿಕೊಳ್ಳದೆ ತೋರಿಕೆಯ ವಿಷಯದಲ್ಲಿ ಮಾತ್ರ ಹೊಗಳಿಕೊಳ್ಳುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳು ವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯ ದಲ್ಲಿ ಹೆಚ್ಚಳಪಡುವದಕ್ಕೆ ನಿಮಗೆ
ಆದರೆ ನನ್ನನ್ನು ನಿಂದಿಸುವದಕ್ಕೆ ಆಸ್ಪದವನ್ನು ಹುಡುಕುವವರಿಗೆ ಯಾವ ಎಡೆಯೂ ಸಿಕ್ಕದಂತೆ ನಾನು ಮಾಡುವದನ್ನು ಇನ್ನು ಮುಂದೆಯೂ ಮಾಡುವೆನು; ಅವರು ಯಾವದರಲ್ಲಿ ಹೊಗಳು ತ್ತಾರೋ ಅದರಲ್ಲಿ ನಮ್ಮಂತೆಯೇ ಕಂಡುಬರಲಿ.
ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು.
ಹೆಚ್ಚಳಪಡುವದು ಹೇಗೂ ವಿಹಿತವಲ್ಲ ದಿದ್ದರೂ ಅದು ನನಗೆ ಅವಶ್ಯವಾಗಿದೆ; ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳ ಮತ್ತು ಪ್ರಕಟನೆಗಳ ವಿಷಯವಾಗಿ ಹೇಳುತ್ತೇನೆ.
ಹಾಗಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡು ವದರಿಂದ ಉಂಟಾಗುವ ಆ ವಾಗ್ದಾನವು ನಂಬುವ ವರಿಗೇ ಕೊಡಲ್ಪಡುವಂತೆ ಎಲ್ಲರೂ ಪಾಪಕ್ಕೊಳ ಗಾಗಿದ್ದಾರೆಂದು ಬರಹವು ತೀರ್ಮಾನಿಸಿತು.
ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ.
ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.