Home Bibles ರೋಮಾಪುರದವರಿಗೆ 2:26 · ಕನ್ನಡ ಬೈಬಲ್
ರೋಮಾಪುರದವರಿಗೆ 2:26 · ಕನ್ನಡ ಬೈಬಲ್

ಆದದರಿಂದ ಸುನ್ನತಿಯಿಲ್ಲದವನು ನ್ಯಾಯ ಪ್ರಮಾಣದ ನೀತಿಯನ್ನು ಕೈಕೊಂಡರೆ ಸುನ್ನತಿಯಿಲ್ಲದವನಾದ ಅವನಿಗೆ ಅದು ಸುನ್ನತಿಯೆಂದು ಎಣಿಸಲ್ಪಡುವದಿಲ್ಲವೋ?

Cross references

ಯೆಹೋಶುವ 5:5

ಐಗುಪ್ತದಿಂದ ಹೊರಟ ಜನರೆಲ್ಲರೂ ಸುನ್ನತಿಮಾಡಲ್ಪಟ್ಟಿದ್ದರು; ಆದರೆ ಐಗುಪ್ತ ದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗದಲ್ಲಿ ಹುಟ್ಟಿದ ಸಕಲ ಜನರು ಸುನ್ನತಿಮಾಡಲ್ಪಡಲಿಲ್ಲ.

ಯೆಶಾಯ 56:6

ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ

ಮತ್ತಾಯ 8:11

ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್‌ ಇಸಾಕ್‌ ಯಾಕೋಬ್‌ ಅವರೊಂದಿಗೆ ಕೂತುಕೊಳ್ಳುವರು.

ಮತ್ತಾಯ 15:28

ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.

ಅಪೋಸ್ತಲರ ಕೃತ್ಯಗಳು 10:2

ಅವನು ಭಕ್ತನೂ ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನವನ್ನು ಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಇದ್ದನು.

ಅಪೋಸ್ತಲರ ಕೃತ್ಯಗಳು 10:34

ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ.

ಅಪೋಸ್ತಲರ ಕೃತ್ಯಗಳು 11:3

ನೀನು ಸುನ್ನತಿಯಿಲ್ಲದವರ ಬಳಿಗೆ ಹೋಗಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಕೇಳಿದರು.

ರೋಮಾಪುರದವರಿಗೆ 3:30

ದೇವರು ಒಬ್ಬನೇ ಆಗಿರಲಾಗಿ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸು ವದಕ್ಕೆ ಅವರ ನಂಬಿಕೆಯಿಂದಲೇ. ಸುನ್ನತಿಯಿಲ್ಲ ದವರನ್ನು ಹಾಗೆಯೇ ನಿರ್ಣಯಿಸುವದು ನಂಬಿಕೆಯ ಮೂಲಕವೇ.ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.

ರೋಮಾಪುರದವರಿಗೆ 8:4

ಹೀಗೆ ಶರೀರಕ್ಕನುಸಾರ ವಾಗಿ ನಡೆಯದೆ ಆತ್ಮನಿಗನುಸಾರವಾಗಿ ನಡೆಯುವವ ರಾದ ನಮ್ಮಲ್ಲಿ ನ್ಯಾಯಪ್ರಮಾಣದ ನೀತಿಯು ನೆರ ವೇರುವದು.

1 ಕೊರಿಂಥದವರಿಗೆ 7:18

ಸುನ್ನತಿ ಯಲ್ಲಿದ್ದು ಕರೆಯಲ್ಪಟ್ಟವನು ಯಾವನಾದರೂ ಇದ್ದಾನೋ? ಅವನು ಸುನ್ನತಿ ಇಲ್ಲದವನಂತಾಗ ಬಾರದು; ಸುನ್ನತಿ ಇಲ್ಲದೆ ಕರೆಯಲ್ಪಟ್ಟವನು ಯಾವ ನಾದರೂ ಇದ್ದಾನೋ? ಅವನು ಸುನ್ನತಿ ಮಾಡಿಸಿ ಕೊಳ್ಳಬಾರದು.

ಎಫೆಸದವರಿಗೆ 2:11

ಆದಕಾರಣ ಪೂರ್ವಕಾಲದಲ್ಲಿ ಶಾರೀರಿಕವಾಗಿ ಅನ್ಯಜನರಾಗಿದ್ದು ಶರೀರದಲ್ಲಿ ಕೈಗಳಿಂದ ಮಾಡಲ್ಪಟ ಸುನ್ನತಿಯಿದ್ದವರೆಂದು ಕರೆಯಲ್ಪಟ್ಟವರಿಂದ ಸುನ್ನತಿಯಿಲ್ಲ ದವರೆಂದು ನೀವು ಕರೆಯಲ್ಪಟ್ಟಿದ್ದೀರಿ.

ಫಿಲಿಪ್ಪಿಯವರಿಗೆ 3:3

ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.

ಕೊಲೊಸ್ಸೆಯವರಿಗೆ 2:11

ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದ್ದಿರಿ; ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ; ಇದು ಕ್ರಿಸ್ತನಿಂದಾದ ಸುನ್ನತಿಯಾಗಿದ್ದು ಪಾಪದ ಶರೀರ ವನ್ನು ವಿಸರ್ಜಿಸುವದೇ.

Interlinear

Choose Theme