Home Bibles ರೋಮಾಪುರದವರಿಗೆ 2:11 · ಕನ್ನಡ ಬೈಬಲ್
ರೋಮಾಪುರದವರಿಗೆ 2:11 · ಕನ್ನಡ ಬೈಬಲ್

ದೇವರಲ್ಲಿ ಪಕ್ಷಪಾತವಿಲ್ಲ.

Cross references

ದ್ವಿತೀಯೋಪದೇಶಕಾಂಡ 10:17

ನಿಮ್ಮ ದೇವರಾದ ಕರ್ತನು ಆತನೇ ದೇವರುಗಳ ದೇವರು, ಕರ್ತರ ಕರ್ತನು, ಮಹಾ ದೇವರು, ಪರಾಕ್ರಮಿಯೂ ಭಯಂಕರನೂ. ಆತನು ಮುಖದಾಕ್ಷಿಣ್ಯ ನೋಡುವದಿಲ್ಲ, ಲಂಚ ತೆಗೆದುಕೊಳ್ಳು ವದಿಲ್ಲ.

ದ್ವಿತೀಯೋಪದೇಶಕಾಂಡ 16:19

ನೀನು ನ್ಯಾಯವನ್ನು ಓರೆಮಾಡಬಾರದು,ನೀನು ಮುಖದಾಕ್ಷಿಣ್ಯ ಮಾಡಬಾರದು; ಇಲ್ಲವೆ ಲಂಚ ತೆಗೆದುಕೊಳ್ಳಬಾರದು; ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ ನೀತಿವಂತರ ಮಾತು ಗಳನ್ನು ಡೊಂಕುಮಾಡುತ್ತದೆ.

2 ದಿನವೃತ್ತಾಂತ 19:7

ಆದಕಾರಣ ಕರ್ತನ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡಿಸಿರಿ. ನಮ್ಮ ಕರ್ತನಾದ ದೇವರ ಬಳಿಯಲ್ಲಿ ಅನ್ಯಾಯವಾದರೂ ಮುಖದಾಕ್ಷಿಣ್ಯ ವಾದರೂ ಲಂಚ ತೆಗೆದುಕೊಳ್ಳುವದಾದರೂ ಇಲ್ಲ ಅಂದನು.

ಯೋಬ 34:19

ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.

ಸಾಮೇತಿಗಳು 24:23

ಇವು ಸಹ ಜ್ಞಾನಿಗಳಿಗೆ ಸಂಬಂಧಪಟ್ಟಿವೆ. ನ್ಯಾಯವಿಚಾರಣೆ ಯಲ್ಲಿ ಪಕ್ಷಪಾತವು ಸರಿಯಲ್ಲ.

ಮತ್ತಾಯ 22:16

ಮತ್ತು ತಮ್ಮ ಶಿಷ್ಯರನ್ನು ಹೆರೋದಿಯರೊಂದಿಗೆ ಆತನ ಬಳಿಗೆ ಕಳುಹಿಸಿ--ಬೋಧಕನೇ, ನೀನು ಸತ್ಯವಂತನು ಮತ್ತು ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವಾತನು; ಇದಲ್ಲದೆ ನೀನು ಯಾರನ್ನೂ ಲಕ್ಷ್ಯಮಾಡುವಾತನಲ್ಲ; ಯಾಕಂದರೆ ನೀನು ಮುಖದಾಕ್ಷಿಣ್ಯ ಮಾಡುವದಿಲ್ಲ ಎಂದು

ಲೂಕ 20:21

ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು.

ಅಪೋಸ್ತಲರ ಕೃತ್ಯಗಳು 10:34

ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ.

ಗಲಾತ್ಯದವರಿಗೆ 2:6

ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯ ಲಿಲ್ಲ; (ಅವರು ಎಂಥವ ರಾಗಿದ್ದರೂ ನನಗೆ ಲಕ್ಷ್ಯವಿಲ್ಲ; ದೇವರು ಪಕ್ಷಪಾತಿಯಲ್ಲ). ಯಾಕಂದರೆ ಮಾನಿಷ್ಠರೆನಿಸಿ ಕೊಂಡವರು ನನಗೆ ಹೆಚ್ಚೇನೂ ಕೂಡಿಸಲಿಲ್ಲ.

ಗಲಾತ್ಯದವರಿಗೆ 6:7

ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

ಎಫೆಸದವರಿಗೆ 6:9

ಯಜಮಾನರೇ, ನೀವು ಅದೇ ರೀತಿಯಾಗಿ ಮಾಡಿರಿ. ಪರಲೋಕದಲ್ಲಿ ನಿಮ್ಮ ಯಜಮಾನನಾಗಿರು ವಾತನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವದನ್ನು ಬಿಟ್ಟುಬಿಡಿರಿ.

ಕೊಲೊಸ್ಸೆಯವರಿಗೆ 3:25

ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ಅದರಲ್ಲಿ ಪಕ್ಷಪಾತವಿಲ್ಲ.

1 ಪೇತ್ರ 1:17

ಪ್ರತಿಯೊಬ್ಬನ ಕೆಲಸವನ್ನು ನೋಡಿ ಪಕ್ಷಪಾತ ವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆ ಯೆಂದು ಬೇಡಿಕೊಳ್ಳುವವರಾಗಿರಲಾಗಿ ನಿಮ್ಮ ಪ್ರವಾಸ ಕಾಲವನ್ನು ಭಯದಿಂದ ಕಳೆಯಿರಿ.

Interlinear

Choose Theme