ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
Cross references
ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ.
ಓ ಪರಾಕ್ರಮಶಾಲಿಗಳೇ, ಕರ್ತನಿಗೆ ಘನವನ್ನೂ ಬಲವನ್ನೂ ಸಲ್ಲಿಸಿರಿ;
ಕರ್ತನ ವಾಕ್ಯ ದಿಂದ ಆಕಾಶವೂ ಆತನ ಬಾಯಿಯ ಉಸುರಿನಿಂದ ಅದರ ಸೈನ್ಯವೆಲ್ಲವೂ ಉಂಟಾದವು.
ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ.
ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
ಎಲ್ಲವುಗಳನ್ನು ಕರ್ತನು ತನಗಾಗಿ ಮಾಡಿದ್ದಾನೆ; ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿ ದ್ದಾನೆ.
ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
ದಾನಿಯೇ ಲನು--ದೇವರ ಹೆಸರು ಎಂದೆಂದಿಗೂ ಸ್ತುತಿಸಲ್ಪಡಲಿ; ಯಾಕಂದರೆ ಜ್ಞಾನವೂ ಬಲವೂ ಆತನದಾಗಿದೆ;
ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್.
ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.