ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ--ನನ್ನನ್ನು ಹುಡುಕದವರಿಗೆ ಸಿಕ್ಕಿದೆನು, ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು ಎಂದು ಹೇಳುತ್ತಾನೆ.ಆದರೆ ಅವನು ಇಸ್ರಾಯೇಲ್ಯರ ವಿಷಯವಾಗಿ--ನನಗೆ ಅವಿಧೇಯ ರಾಗಿ ಎದುರು ಮಾತನಾಡುವ ಜನರ ಕಡೆಗೆ ನಾನು ದಿನವೆಲ್ಲಾ ಕೈ ಚಾಚಿದೆನು ಎಂದು ಹೇಳುತ್ತಾನೆ.
Cross references
ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
ಇಗೋ ನಾನು ಅವನನ್ನು ಜನಗಳಿಗೆ ಸಾಕ್ಷಿಯನ್ನಾಗಿಯೂ ಅವರಿಗೆ ನಾಯಕನನ್ನಾಗಿಯೂ ಅಧಿಪತಿಯನ್ನಾ ಗಿಯೂ ಕೊಟ್ಟೆನು.
ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.
ಕೇಳದವರಿಂದ ನಾನು ವಿಚಾರಿಸಲ್ಪಟ್ಟಿದ್ದೇನೆ, ನನ್ನನ್ನು ಹುಡುಕದವರಿಗೂ ಕಂಡು ಕೊಳ್ಳಲ್ಪಟ್ಟಿದ್ದೇನೆ; ನನ್ನ ಹೆಸರಿನಿಂದ ಕರೆಯಲ್ಪಡದ ಜನಾಂಗಕ್ಕೆ--ಇಗೋ, ಇದ್ದೇನೆ; ಇಗೋ, ಇದ್ದೇನೆ ಎಂದು ಹೇಳಿದೆನು.
ಹೀಗೆ ಕಡೆಯವರು ಮೊದಲನೆಯವರಾಗುವರು; ಮೊದಲನೆಯವರು ಕಡೆಯವರಾಗುವರು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಎಂದು ಹೇಳಿದನು.
ಆದದರಿಂದ ನೀವು ಹೆದ್ದಾರಿಗಳಿಗೆ ಹೊರಟುಹೋಗಿ ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ ಅಂದನು.
ಆಗ ಯಜ ಮಾನನು ಸೇವಕನಿಗೆ--ನೀನು ಬೀದಿಗಳಿಗೂ ಬೇಲಿಗಳ ಬಳಿಗೂ ಹೊರಟುಹೋಗಿ ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು;
ಹಾಗಾದರೆ ನಾವು ಏನು ಹೇಳೋಣ? ನೀತಿ ಯನ್ನು ಹೊಂದುವದಕ್ಕೆ ಪ್ರಯತ್ನಮಾಡದ ಅನ್ಯ ಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾಗುವ ನೀತಿಯು ದೊರಕಿತು.
ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.