Home Bibles ಪ್ರಕಟನೆ 21:17 · ಕನ್ನಡ ಬೈಬಲ್
ಪ್ರಕಟನೆ 21:17 · ಕನ್ನಡ ಬೈಬಲ್

ಅದರ ಗೋಡೆಯನ್ನು ಅವನು ಅಳತೆ ಮಾಡಿದನು; ಅದು ನೂರನಾಲ್ವತ್ತ ನಾಲ್ಕು ಮೊಳ ದಷ್ಟಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೂತನ ಮೊಳ.

Cross references

ದ್ವಿತೀಯೋಪದೇಶಕಾಂಡ 3:11

ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು.

ಪ್ರಕಟನೆ 7:4

ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ.

ಪ್ರಕಟನೆ 13:18

ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.

ಪ್ರಕಟನೆ 14:3

ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡಿನಂತಿದ್ದ ಹಾಡನ್ನು ಅವರು ಹಾಡಿದರು. ಭೂ ಲೋಕದೊಳಗಿಂದ ವಿಮೋಚಿಸಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.

ಪ್ರಕಟನೆ 21:9

ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ--ಇಲ್ಲಿಗೆ ಬಾ, ಕುರಿಮರಿಯಾದಾತನಿಗೆ ಹೆಂಡತಿಯಾಗ ತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿದನು.

Interlinear

Choose Theme