ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು.
Cross references
ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ
ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
ಮೂಡಣದಿಂದ ನೀತಿವಂತ ನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ಮುಂದೆ ಕೊಟ್ಟುಬಿಟ್ಟು ಅವ ನನ್ನು ರಾಜರ ಮೇಲೆ ಆಳುವದಕ್ಕೆ ಮಾಡಿದವನು ಯಾರು? ಅವನ ಕತ್ತಿಗೆ ದೂಳನ್ನಾಗಿಯೂ ಅವನ ಬಿಲ್ಲಿಗೆ ಹಾರಿ ಹೋಗುವ ಹೊಟ್ಟಿನಂತೆಯೂ ಅವ ರನ್ನು ಕೊಟ್ಟನು.
ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇನೆ, ಸೂರ್ಯೋ ದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸು ವನು; ಅವನು ಜೇಡಿಮಣ್ಣಿನಂತೆಯೂ ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಬರುವನು.
ನಾನು ಬೆಟ್ಟ ಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ, ನದಿ ಗಳನ್ನು ದ್ವೀಪಗಳನ್ನಾಗಿಯೂ ಕೆರೆಗಳನ್ನು ಬತ್ತಿ ಹೋಗುವಂತೆಯೂ ಮಾಡುವೆನು.
ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು.
ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು.
ಇದಲ್ಲದೆ ಮತ್ತೊಬ್ಬ ದೂತನು ಜೀವವುಳ್ಳ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಲದಿಂದ ಏರಿ ಬರುವದನ್ನು ಕಂಡೆನು. ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವ ಅಧಿಕಾರ ಹೊಂದಿದ ಆ ನಾಲ್ಕು ಮಂದಿ ದೂತರಿಗೆ--
ಅದು ತುತೂರಿಯನ್ನು ಹಿಡಿದಿದ್ದ ಆರನೆಯ ದೂತನಿಗೆ--ಯೂಫ್ರೇಟೀಸ್ ಮಹಾ ನದಿಯಲ್ಲಿ ಬಂಧಿಸಲ್ಪಟ್ಟಿರುವ ನಾಲ್ಕು ಮಂದಿ ದೂತರನ್ನು ಬಿಚ್ಚಿಬಿಡು ಎಂದು ಹೇಳಿತು.
ಎರಡನೆಯ ಆಪತ್ತು ಕಳೆದುಹೋಯಿತು; ಇಗೋ, ಮೂರನೆಯ ಆಪತ್ತು ಬೇಗನೆ ಬರುತ್ತದೆ.
ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ.