Home Bibles ಪ್ರಕಟನೆ 14:8 · ಕನ್ನಡ ಬೈಬಲ್
ಪ್ರಕಟನೆ 14:8 · ಕನ್ನಡ ಬೈಬಲ್

ಅವನ ಹಿಂದೆ ಇನ್ನೊಬ್ಬ ದೂತನು ಬಂದು--ಬಾಬೆಲೆಂಬ ಆ ಮಹಾನಗರಿಯು ಬಿದ್ದಳು, ಬಿದ್ದಳು; ಯಾಕಂದರೆ ಅವಳು ತನ್ನ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಸಕಲ ಜನಾಂಗಗಳು ಕುಡಿಯುವಂತೆ ಮಾಡಿದಳು ಎಂದು ಹೇಳಿದನು.

Cross references

ಯೆಶಾಯ 21:9

ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ ಮತ್ತು ಪ್ರತ್ಯುತ್ತರ ವಾಗಿ--ಬಾಬೆಲ್‌ ಬಿತ್ತು, ಆದರೆ ಕೆತ್ತಿದ ದೇವತೆಗಳ ವಿಗ್ರಹಗಳನ್ನು ಮುರಿದು ನೆಲಸಮ ಮಾಡಿಬಿಟ್ಟರು ಎಂದು ಹೇಳಿದನು.

ಯೆರೆಮಿಯ 51:7

ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು.

ಯೆಹೆಜ್ಕೇಲ 16:15

ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ.

ದಾನಿಯೇಲ 4:30

ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.

ನಹೂಮ 3:19

ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?

ಪ್ರಕಟನೆ 11:8

ಇವರ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಆತ್ಮಿಕವಾಗಿ ಸೊದೋಮ್‌ ಎಂತಲೂ ಐಗುಪ್ತ ಎಂತಲೂ ಕರೆಯುವರು; ನಮ್ಮ ಕರ್ತನು ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು.

ಪ್ರಕಟನೆ 13:15

ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು.

ಪ್ರಕಟನೆ 16:19

ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು.

ಪ್ರಕಟನೆ 17:2

ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು.

ಪ್ರಕಟನೆ 17:18

ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು.

ಪ್ರಕಟನೆ 18:2

ಅವನು ಗಟ್ಟಿ ಯಾದ ಶಬ್ದದಿಂದ ಕೂಗುತ್ತಾ--ಮಹಾಬಾಬೆಲ್‌ ಬಿದ್ದಳು, ಬಿದ್ದಳು; ದೆವ್ವಗಳ ವಾಸಸ್ಥಾನವೂ ಅಶುದ್ಧಾತ್ಮಗಳ ಆಶ್ರಯವೂ ಅಪವಿತ್ರವಾಗಿಯೂ ಅಸಹ್ಯವಾಗಿಯೂ ಇರುವ ಸಕಲ ವಿಧವಾದ ಪಕ್ಷಿಗಳ ಪಂಜರವೂ ಆದಳು.

ಪ್ರಕಟನೆ 18:10

ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು.

ಪ್ರಕಟನೆ 18:18

ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು.

ಪ್ರಕಟನೆ 19:2

ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು.

Interlinear

Choose Theme